ದರ್ಬೆ: ವಿದ್ಯಾರ್ಥಿಗಳಿಗೆ ಬೀಡಿ ಮಾರಾಟ ಯತ್ನ?

0

ಪುತ್ತೂರು: ವಿದ್ಯಾರ್ಥಿಗಳಿಗೆ ಬೀಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಘಟನೆ ಮಾ.12ರಂದು ದರ್ಬೆಯಲ್ಲಿ ನಡೆದಿದೆ.

ಮಧ್ಯಪ್ರದೇಶ ಮೂಲದ ನಾಲ್ವರ ತಂಡ ವಿದ್ಯಾರ್ಥಿಗಳಿಗೆ ಬೀಡಿ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬೀಡಿಯಲ್ಲಿ ಗಾಂಜಾ ತುಂಬಿಸಿ ಮಾರಾಟ ಮಾಡಲಾಗುತ್ತಿತ್ತೇ ಎನ್ನುವ ಕುರಿತು ನಾಗರಿಕರು ಸಂಶಯ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here