









ನೆಲ್ಯಾಡಿ: ಪಿಕಪ್ನಿಂದ ಅನ್ಲೋಡ್ ಮಾಡುವ ವೇಳೆ ವಿದ್ಯುತ್ ಕಂಬ ಬಡಿದು ಕಾರ್ಮಿಕ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಮಾ.16ರಂದು ಸಂಜೆ ನಡೆದಿದೆ.



ಕೊಕ್ಕಡ ಗ್ರಾಮದ ಮಹಾವೀರ ಕಾಲೋನಿ ನಿವಾಸಿ, ದಿ.ಗುರುವ ಅವರ ಪುತ್ರ ಶಿವಪ್ಪ(39ವ.) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಕೊಕ್ಕಡದ ವಿದ್ಯುತ್ ಗುತ್ತಿಗೆದಾರರೊಬ್ಬರ ಜೊತೆ ಕೆಲಸ ಮಾಡುತ್ತಿದ್ದು ಮಾ.16ರಂದು ಸಂಜೆ ಕೊಕ್ಕಡದ ಭಜನಾ ಮಂದಿರದ ಸಮೀಪ ಪಿಕಪ್ನಿಂದ ವಿದ್ಯುತ್ ಕಂಬ ಅನ್ಲೋಡ್ ಮಾಡುವ ವೇಳೆ ಆಕಸ್ಮಿಕವಾಗಿ ತಲೆಗೆ ವಿದ್ಯುತ್ ಕಂಬ ಬಡಿದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಮೃತರು ತಾಯಿ ಅಕ್ಕು, ಪತ್ನಿ ಸುನಂದ, ಪುತ್ರ ಸ್ವಸ್ತಿಕ್, ನಾಲ್ವರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.










