ಪುತ್ತೂರಿನಲ್ಲಿ ಗಾಳಿ ಮಳೆಗೆ ದಾರ ಕಡಿದು ಭೂಸ್ಪರ್ಶಗೊಂಡ ರಾಷ್ಟ್ರಧ್ವಜ !

0

ಪುತ್ತೂರು:ಇತ್ತೀಚೆಗೆ ನೆಲ್ಲಿಕಟ್ಟೆ ಉದ್ಯಾನವನದಲ್ಲಿ ಧ್ವಜಾರೋಹಣಗೊಂಡಿದ್ದ ರಾಜ್ಯದ ಅತಿ ಎತ್ತರದ 3ನೇ ರಾಷ್ಟ್ರಧ್ವಜ ಮಾ.16ರಂದು ಗಾಳಿ ಮಳೆಗೆ ದಾರ ಕಡಿದು ಭೂಸ್ಪರ್ಶಗೊಂಡಿದೆ.


ಗಾಳಿಯ ರಭಸಕ್ಕೆ ರಾಷ್ಟ್ರಧ್ವಜದ ದಾರ ಕಡಿದು ಪಕ್ಕದ ವಿದ್ಯುತ್ ತಂತಿಗೆ ಬಿದ್ದಿತ್ತು.ಈ ವೇಳೆ ವಿದ್ಯುತ್ ಶಾರ್ಟ್‌ಸರ್ಕ್ಯೂಟ್ ಆಗಿ ವಿದ್ಯುತ್ ಒಮ್ಮೆಲೇ ಆಫ್ ಆಗಿದೆ.ಸಂಬಂಧಿಸಿದ ಇಲಾಖೆಯವರು ಆಗಮಿಸಿ ರಾಷ್ಟ್ರಧ್ವಜವನ್ನು ಗೌರವ ಪೂರ್ವಕವಾಗಿ ತಂತಿಯಿಂದ ತೆರವು ಮಾಡಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲಾಗಿದೆ.ಕರ್ನಾಟಕ ರಾಜ್ಯದ 3ನೇ ಅತೀ ಎತ್ತರದ ಮತ್ತು ತಾಲೂಕು ಕೇಂದ್ರಗಳಲ್ಲೇ ಪ್ರಥಮವಾಗಿರುವ ರಾಷ್ಟ್ರಧ್ವಜಸ್ಥಂಭದ ಉದ್ಘಾಟನೆ ಮತ್ತು ತ್ರಿವರ್ಣ ಧ್ವಜಾರೋಹಣ ಕಾರ್ಯಕ್ರಮ ಫೆ.17ರಂದು ಪುತ್ತೂರು ನೆಲ್ಲಿಕಟ್ಟೆಯಲ್ಲಿರುವ ಉದ್ಯಾನವನದಲ್ಲಿ ನಡೆದಿತ್ತು.ಇದೀಗ ರಾಷ್ಟ್ರಧ್ವಜ ಗಾಳಿ ಮಳೆಯ ವೇಗಕ್ಕೆ ಭೂಸ್ಪರ್ಶಗೊಂಡಿದೆ.ಇದರ ಜೊತೆಗೆ ಕಂಬವೂ ಸ್ವಲ್ಪ ವಾಲಿಕೊಂಡಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here