ಹನುಮಗಿರಿ ಬ್ರಹ್ಮಕಲಶೋತ್ಸವ ಹಿನ್ನೆಲೆ – ಪುತ್ತೂರು ನಗರ ಸಮಿತಿ ಸಭೆ

0

ರಾಮನಿಗೊಂದು, ಆಂಜನೇಯನಿಗೊಂದು ತೆಂಗಿನ ಕಾಯಿ ಸಮರ್ಪಣೆಗೆ ಮನವಿ

ಪುತ್ತೂರು: ಹನುಮಗಿರಿಯ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ಸವದ ಪುತ್ತೂರು ನಗರ ಸಮಿತಿಯ ಸಭೆಯು ಪುತ್ತೂರು ಸಮಿತಿ ಅಧ್ಯಕ್ಷ ಲೋಕೇಶ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ವಿಜಯ ಸುಪಾರಿ ಹಾಲ್‌ನಲ್ಲಿ ನಡೆಯಿತು.


ಕೇಂದ್ರ ಸಮಿತಿಯ ಉಪಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಎಪ್ರಿಲ್ ತಿಂಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ತಯಾರಿಯ ವಿವರ ನೀಡಿ ಮಾತನಾಡಿ, ಪುತ್ತೂರಿನ ಪ್ರತಿಯೊರ್ವ ಭಕ್ತರಿಂದ ರಾಮನಿಗೊಂದು ಆಂಜನೇಯನಿಗೊಂದು ತೆಂಗಿನಕಾಯಿ ಸಂಗ್ರಹಿಸಿ ಅರ್ಪಿಸುವ ಕಾರ್ಯಕ್ರಮವಿರುವುದರಿಂದ ಅಲ್ಲಲ್ಲಿ ಸಂಗ್ರಹ ಕೇಂದ್ರ ತೆರೆಯುವಂತೆ ತಿಳಿಸಿದರು. ಎ.3ರಂದು ಅಯೋಧ್ಯೆಯಿಂದ ರಾಮ ಜ್ಯೋತಿ ರಥವು ಆಗಮಿಸಿ ಪುತ್ತೂರಿನ ಎಲ್ಲಾ ದೇವಸ್ಥಾನ, ಭಜನಾ ಮಂದಿರಗಳಿಗೆ ರಾಮಜ್ಯೋತಿಯ ವಿತರಣೆ ಮಾಡುವ ವ್ಯವಸ್ಥೆಯ ಬಗ್ಗೆಯೂ ತಿಳಿಸಿದರು. ರಾಮತಾರಕ ಯಜ್ಞ ಭಜನಾ ನಿರಂತರ ನಡೆಯುತ್ತಿರಬೇಕು. ಕಾರ್ಯಕ್ರಮದಲ್ಲಿ ಮಹಿಳೆಯರು ಪೂರ್ಣಕುಂಭ ಸ್ವಾಗತ ಹಾಗೂ ಇನ್ನಿತರ ಸೇವಾ ಕಾರ್ಯಗಳಿಗಾಗಿ ವಿವಿಧ ಸಮಿತಿಗಳನ್ನು ರಚಿಸಬೇಕು ಹಾಗೂ ಇಂದಿನಿಂದಲೇ ಈ ದೇವರ ಕಾರ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.


ಲೋಕೇಶ್ ಹೆಗ್ಡೆಯವರು ಮಾತನಾಡಿ ವಿವಿಧ ಸಮಿತಿಗಳ ಸಂಚಾಲಕರ ವಿವರ ನೀಡಿದರು. ರಾಮರಥದ ಸಂಚಾಲಕರಾಗಿ ಸತೀಶ್ ನಾೖಕ್‌ ಪರ್ಲಡ್ಕ, ರಾಮತಾರಕ ಸಂಚಾಲಕರಾಗಿ ಡಾ. ಕೃಷ್ಣಪ್ರಸನ್ನ, ಭಜನಾ ಸಂಚಾಲಕರಾಗಿ ರಾಮಚಂದ್ರ ಕಾಮತ್, ನಾರಿಕೇಳ ಸಮಿತಿ ಸಂಚಾಲಕರಾಗಿ ಸುಂದರ ಪೂಜಾರಿ ಬಡಾವು, ಮಹಿಳಾ ಸಂಚಾಲಕರಾಗಿ ಸ್ವರ್ಣಲತಾ ಹೆಗ್ಡೆಯವರನ್ನು ಘೋಷಿಸಲಾಯಿತು. ನಾವೆಲ್ಲರೂ ಶ್ರೀರಾಮ ಮತ್ತು ಆಂಜನೇಯದೇವರ ಸೇವೆ ಮಾಡಲು ಸಿಕ್ಕ ಅವಕಾಶವೆಂದು ಇಂದಿನಿಂದಲೇ ನಮ್ಮನ್ನು ತೊಡಗಿಸಿಕೊಳ್ಳೋಣ ಎಂದರು.

ಸಭೆಯಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷರುಗಳಾದ ಜೀವಂದರ್ ಜೈನ್, ಯುವರಾಜ ಪೆರಿಯತ್ತೋಡಿ, ಶಿವಕುಮಾರ್, ಮಹಿಳಾ ಪ್ರಮುಖ್ ವಿದ್ಯಾಗೌರಿ, ಪ್ರ. ಕಾರ್ಯದರ್ಶಿಗಳಾದ ಜಗದೀಶ ನಾಯಕ್, ರಾಧಾಕೃಷ್ಣ ನಂದಿಲ, ಸತೀಶ್ ನಾಯಕ್, ಸುಂದರ ಪೂಜಾರಿ ಬಡಾವು, ರಾಮಚಂದ್ರ ಕಾಮತ್, ಸ್ವರ್ಣಲತಾಹೆಗ್ಡೆ, ವಿಶ್ವನಾಥ ಗೌಡ ಬನ್ನೂರು, ರಾಮದಾಸ ಹಾರಾಡಿ, ದೀಕ್ಷಾ ಪೈ, ಇಂದುಶೇಖರ ಪಿ. ಬಿ., ಮನೋಹರ ಕಲ್ಲಾರೆ, ಸುರೇಶ್ಚಂದ್ರ ರೈ, ನಿಲಾಂತ್ ಬೊಳುವಾರು ಮೊದಲಾದವರು ಉಪಸ್ತಿತರಿದ್ದರು. ಲೋಕೇಶ ಹೆಗ್ಡೆ ಸ್ವಾಗತಿಸಿ, ರಾಧಾಕೃಷ್ಣ ನಂದಿಲ ವಂದಿಸಿದರು.

LEAVE A REPLY

Please enter your comment!
Please enter your name here