ಭಂಡಾರಿ ಕುಟುಂಬ ಸೇವಾ ಟ್ರಸ್ಟ್ ದೈವಸ್ಥಾನ, ಆರ್ಲಪದವು ಕಿನ್ನಿಮಾಣಿ ದೈವಸ್ಥಾನಕ್ಕೆ 15 ಲಕ್ಷ ರೂ. ಅನುದಾನ ಬಿಡುಗಡೆ – ಶಾಸಕ ಅಶೋಕ್ ರೈ

0


ಪುತ್ತೂರು: ಆರ್ಲಪದವು ಕಿನ್ನಿಮಾಣಿ-ಪೂಮಾಣಿ ದೈವಸ್ಥಾನ ಅಭಿವೃದ್ದಿಗೆ 10 ಲಕ್ಷ ಹಾಗೂ ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಭಂಡಾರಿ ಕುಟುಂಬ ಸೇವಾಟ್ರಸ್ಟ್ ನ ದೈವ-ದೇವಸ್ಥಾನದ ಅಭಿವೃದ್ದಿಗೆ 5 ಲಕ್ಷ ಅನುದಾನ ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರುಗೊಂಡಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.


ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಆರ್ಲಪದವು ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಅಭಿವೃದ್ದಿಗೆ 10 ಲಕ್ಷ ಅನುದಾನ ಒದಗಿಸುವ ಸಲುವಾಗಿ ದೈವಸ್ಥಾನ ಸಮಿತಿಯವರು ಇತ್ತೀಚೆಗೆ ಶಾಸಕರ ಮೂಲಕ ಮನವಿ ಮಾಡಿದ್ದರು. ಅದೇ ರೀತಿ ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಭಂಡಾರಿ ಸಮಾಜ ಟ್ರಸ್ಟ್ನ ದೈವಸ್ಥಾನಕ್ಕೆ ಅನುದಾನಕ್ಕೆ ಮನವಿ ಸಲ್ಲಿಸಲಾಗಿತ್ತು. ಎರಡೂ ದೈವಸ್ಥಾನಗಳಿಗೆ ಸರಕಾರ ಅನುದಾನವನ್ನು ಬಿಡುಗಡೆ ಮಾಡಿದೆ. ಬಂಟ್ವಾಳ ತಾಲೂಕಿನ ಭಂಡಾರಿ ಸಮಾಜದ ಟ್ರಸ್ಟ್ಗೆ ಇಷ್ಟು ವರ್ಷದಲ್ಲಿ ಯಾವುದೇ ಅನುದಾನ ಲಭ್ಯವಾಗಿರಲಿಲ್ಲ, ಶಾಸಕ ಅಶೋಕ್ ರೈ ಮೂಲಕ ಪಕ್ಕದ ಕ್ಷೇತ್ರದ ದೈವಸ್ಥಾನಕ್ಕೂ ಅನುದಾನ ದೊರಕಿದಂತಾಗಿದೆ.

LEAVE A REPLY

Please enter your comment!
Please enter your name here