






ಉಪವಾಸಿಗರ ಭಕ್ತಿ, ಭಾವ ದ ಇಫ್ತಾರ್ ಕ್ಷಣ ಸಮಾನತೆಯ ಪ್ರತೀಕ :ಎಂ ವಿ ಜಿ


ಸುಳ್ಯ: ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ, ಸುಳ್ಯ ನಗರ ಪಂಚಾಯತ್ ಕೆರೆಮೂಲೆ ವಾರ್ಡ್ ನಿಕಟ ಪೂರ್ವ ಸದಸ್ಯ ಹಿರಿಯ ನ್ಯಾಯವಾದಿ ಎಂ. ವೆಂಕಪ್ಪ ಗೌಡ ರ ಆತಿಥ್ಯ ದಲ್ಲಿ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಮದ್ರಸ ವಠಾರದಲ್ಲಿ ಸೌಹಾರ್ದ ಇಫ್ತಾರ್ ಕೂಟ ಆಯೋಜಿಸಲಾಗಿತ್ತು.



ಈ ಸಂದರ್ಭದಲ್ಲಿ ಮಾತನಾಡಿದ ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ ಮಾತನಾಡಿ ಪವಿತ್ರ ರಂಜಾನ್ ತಿಂಗಳು ಸೌಹಾರ್ದ ತೆಯ ಸಂಕೇತ, ಉಪವಾಸಿಗರನ್ನು ಇಫ್ತಾರ್ ಮೂಲಕ ಉಪಚರಿಸುವ ಪುಣ್ಯ ಕಾರ್ಯಕ್ಕೆ ಹೆಚ್ಚಿನ ಮಹತ್ವವಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂ ವಿ ಜಿ ಇಫ್ತಾರ್ ಕೂಟ ದಲ್ಲಿ ಭಾಗವಹಿಸುವುದು ಪುಣ್ಯದ ಕೆಲಸ, ಇದು ಸಮಾನತೆಯ ಪ್ರತೀಕ ಎಂದರು.
ಈ ಸಂದರ್ಭದಲ್ಲಿ ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಮಹಮ್ಮದ್ ಕೆ ಎಂ ಎಸ್, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್, ಕೆಪೆಕ್ ನಿಗಮದ ಮಾಜಿ ನಿರ್ದೇಶಕ ಪಿ. ಎ. ಮಹಮ್ಮದ್, ನಗರ ಪಂಚಾಯತ್ ನಿಕಟ ಪೂರ್ವ ಸದಸ್ಯರು ಗಳಾದ ಧೀರ ಕ್ರಾಸ್ತ, ಶರೀಫ್ ಕಂಠಿ,ಸಿದ್ದೀಕ್ ಕೊಕ್ಕೊ, ರಿಯಾಜ್ ಕಟ್ಟೆಕ್ಕಾರ್ಸ್,ಅನ್ಸಾರ್ ಉಪಾಧ್ಯಕ್ಷ ಕೆ. ಬಿ. ಇಬ್ರಾಹಿಂ, ಹನೀಫ್ ಕುಂಡಿಲ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಶಹೀದ್ ಪಾರೆ, ಕಾರ್ಯಕ್ರಮ ಸಂಯೋಜಕ ನೌಶಾದ್ ಬಾರ್ಪಣೆ, ಎನ್. ಎ. ಜುನೈದ್ ಭಾಗವಹಿಸಿದ್ದರು. ಸುಮಾರು 600 ಜನರು ಭಾಗವಹಿಸಿದ್ದರು.










