ಬುರೂಜ್ ಶಾಲೆ: ಅಂತಾರಾಷ್ಟ್ರೀಯ ಚಿಂತನ ಗಣಿತ ಪರೀಕ್ಷೆಯಲ್ಲಿ ರಾಷ್ಟ್ರೀಯ ರ‍್ಯಾಂಕ್‌

0

ಪುತ್ತೂರು : ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಇಲ್ಲಿಯ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಚಿಂತನ ಗಣಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದು ಕೊಂಡಿರುತ್ತಾರೆ.


ಝಾಕಿರ್ ಹುಸೈನ್ ಮತ್ತು ಝಾಕಿರ ಬಾನು ದಂಪತಿಯ ಪುತ್ರಿಯಾದ 7 ನೇ ತರಗತಿಯ ರಿಝಾ ಫಾತಿಮಾ ರಾಷ್ಟ್ರೀಯ ಪ್ರಶಸ್ತಿ, ಸುರೇಶ್ ಮತ್ತು ಭವ್ಯ ದಂಪತಿಯ ಪುತ್ರಿಯಾದ 5 ನೇ ತರಗತಿಯ ಧೃತಿ ಎಸ್ ರಾಜ್ಯ ಪ್ರಶಸ್ತಿ, ರಮೇಶ್ ನಾಯ್ಕ್ ಮತ್ತು ಲತಾ ದಂಪತಿಯ ಪುತ್ರಿಯಾದ 6 ನೇ ತರಗತಿಯ ರೇಶ್ಮಾ ಆರ್, ನಿಸಾರ್ ಅಹಮ್ಮದ್ ಮತ್ತು ಶಬನಾ ದಂಪತಿಯ ಪುತ್ರಿಯಾದ ನಾಲ್ಕನೇ ತರಗತಿಯ ಹಯಾ ಫಾತಿಮಾ ಹಾಗೂ ಚೇತನ್ ಕುಮಾರ್ ಮತ್ತು ದೀಪಾ ದಂಪತಿಯ ಪುತ್ರಿಯಾದ ಯು.ಕೆ.ಜಿಯ ಧನ್ವಿ ಸಿ ಪೂಜಾರಿ ,ಮೊಹಮ್ಮದ್ ಯಾಸೀನ್ ಮತ್ತು ಫರ್ಹಾನ ದಂಪತಿಯ ಪುತ್ರನಾದ ಮೂರನೇ ತರಗತಿಯ ಅಬುಸುಬ್ಹಾನ್ ಜಿಲ್ಲಾ ಪ್ರಶಸ್ತಿ ಪಡೆದುಕೊಂಡಿರುತ್ತಾರೆ. ಒಟ್ಟು 44 ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪತ್ರ ತಮ್ಮದಾಗಿಸಿದ್ದಾರೆ.

LEAVE A REPLY

Please enter your comment!
Please enter your name here