






ಪುತ್ತೂರು: ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಮಖೆ ಜಾತ್ರೆ ಹಾಗೂ ಶ್ರೀ ಮಹಾಕಾಳಿ ಮೆಚ್ಚಿ ಜಾತ್ರೆಯ ಪ್ರಯುಕ್ತ ಮಾ.20 ರಂದು ಸಂಜೆ 6.30 ಕ್ಕೆ ಕಲಾರತ್ನ ಬಿ. ರಂಗಯ್ಯ ಬಲ್ಲಾಳ್ ಕೆದಂಬಾಡಿ ಬೀಡು ಸಾರಥ್ಯದ, ವೈಶಾಲಿ ಎಂ ಕುಂದರ್ ಉಪ್ಪಿನಂಗಡಿ ನಿರ್ದೇಶನದ ಸುಸ್ವರ ಮೆಲೋಡೀಸ್ ಉಪ್ಪಿನಂಗಡಿ ತಂಡದಿಂದ ಭಕ್ತಿ ಭಾವ ಸಂಗಮ ಎಂಬ ವಿನೂತನ ಶೈಲಿಯ ಸಂಗೀತ ಕಾರ್ಯಕ್ರಮ ಶ್ರೀ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.


ಕಲಾವಿದರಾಗಿ ಕಲಾರತ್ನ ಬಿ. ರಂಗಯ್ಯ ಬಲ್ಲಾಳ್ ಕೆದಂಬಾಡಿ ಬೀಡು, ವೈಶಾಲಿ ಎಂ ಕುಂದರ್ ಉಪ್ಪಿನಂಗಡಿ, ಪ್ರಜ್ಞಾ ಶೆಟ್ಟಿ ಉಪ್ಪಿನಂಗಡಿ, ಸ್ವಪ್ನಾ ಭಟ್ ಉಪ್ಪಿನಂಗಡಿ, ರಘುರಾಮ್ ಉಪ್ಪಿನಂಗಡಿ,ಕುಶಾಲಪ್ಪ ಗೌಡ ಉಪ್ಪಿನಂಗಡಿ, ಮೋಹಿನಿ ಉಪ್ಪಿನಂಗಡಿ, ಸ್ಮೃತಿ ಪಲ್ಲತ್ತಾರು,ಮಾಯ ಕಾಮತ್ ಉಪ್ಪಿನಂಗಡಿ ಮತ್ತು ಸಾನಿಕ ಎಸ್ ಗಾಣಿಗ ಉಪ್ಪಿನಂಗಡಿ ಭಾಗವಹಿಸಲಿದ್ದಾರೆ.ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕಾಗಿ ತಂಡದ ಸಾರಥ್ಯವನ್ನು ವಹಿಸಿರುವ ಕಲಾರತ್ನ ಬಿ. ರಂಗಯ್ಯ ಬಲ್ಲಾಳ್ ಕೆದಂಬಾಡಿ ಬೀಡು ತಿಳಿಸಿದ್ದಾರೆ.













