






ಪುತ್ತೂರು: ಕೊಡಪ್ಪನಕಲ್ ತರವಾಡ್.ರಾಜ ಮನೆತನದ ಮರ್ಹೂಂ ಅಸೈಯ್ಯೆದ್ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ಹೆಸರಿನಲ್ಲಿ ಜಗತ್ತಿನಾದ್ಯಂತ ಕಾರ್ಯಚಸುತ್ತಿರುವ ಎ.ಐ.ಕೆ.ಯಂ.ಸಿ.ಸಿ. ಪುತ್ತೂರು ತಾಲೂಕು ಘಟಕದ ವತಿಯಿಂದ ಮಾ.19ರಂದು ನೂರಾರು ಬಡ ಕುಟುಂಬಗಳಿಗೆ ಈದ್ ದಿನದ ದಿನಸಿ ಆಹಾರ ಸಾಮಾಗ್ರಿಗಳನ್ನೊ ಳಗೊಂಡ ಈದ್ ಕಿಟ್ ವಿತರಿಸಲಾಯಿತು.


ಕಾರ್ಯಕ್ರಮವನ್ನು ಪುತ್ತೂರು ಮದರ್ರಸ್ ಹಾಜಿ ಅಸಯ್ಯದ್ ಅಹಮ್ಮದ್ ಪೂಕೋಯ ತಂಙಳ್ ದುವಾ ಪ್ರಾರ್ಥನೆ ನೆರವೇರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಪ್ರಪಂಚದಾದ್ಯಂತ ನಿಸ್ವಾರ್ಥವಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡು ಸರ್ವಧರ್ಮಿಯರ ಕಷ್ಟ ಸುಖಗಳಿಗೆ ಸ್ಪಂದಿಸಿ, ಸಮಾನ ನ್ಯಾಯ ಕೊಡಿಸಿ ಜನರ ಪ್ರೀತಿಗೆ ಪಾತ್ರರಾದ ಮರ್ಹೂಂ ಶಿಹಾಬ್ ತಂಙಳ್ ರವರ ಹೆಸರಿನಲ್ಲಿ ಪುತ್ತೂರು ತಾಲೂಕು ಘಟಕ
ಅತ್ಯುತ್ತಮವಾದ ಪುಣ್ಯ ಕಾರ್ಯಕ್ರಮವನ್ನು ಕೈಗೊಂಡಿರುವುದು ಶ್ಲಾಘನೀಯ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಉತ್ತಮ ಪ್ರತಿಫಲ ನೀಡಲಿ ಎಂದು ಹಾರೈಸಿದರು.



ಪುತ್ತೂರಿನಾದ್ಯಂತ ಯಾವುದೇ ಆಡಂಬರ ಪ್ರಚಾರವಿಲ್ಲದೆ ಗುಪ್ತವಾಗಿ ರೋಗಿಗಳಿಗೆ ಆಂಬುಲೆನ್ಸ್ ಸೇವೆ ಹಾಗೂ ಇತರ ಅನಾರೋಗ್ಯವಂತರಿಗೆ ಸಹಾಯ ನೀಡುವುವ ಕಾರ್ಯವು ಹಮ್ಮಿಕೊಂಡು ಬಂದಿರುವ ಎ ಐ ಕೆ ಎಂ ಸಿ ಸಿ ಸಂಘಟನೆಯ ಸೇವೆ ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದವರು ಹೇಳಿದರು ಸಂಘಟನೆಯ ಇಂಥ ಪುಣ್ಯದಾಯಕವಾದ ಸಮಾಜ ಸೇವಾ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ
ಎಲ್ಲಾ ಅನಾಹುತ ಕಷ್ಟಗಳಿಂದ ಮುಕ್ತಿ ಪಡೆಯಬಹುದು ಮತ್ತು ಎಲ್ಲರ ಪ್ರಾರ್ಥನೆ ಗಳಿಸಿಕೊಳ್ಳಬಹುದು ಎಂದು ಮುಕ್ತವಾಗಿ ಕಾರ್ಯಕ್ರಮವನ್ನು ಕೊಂಡಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾತಿನ ಪ್ರಧಾನ ಕಾರ್ಯದರ್ಶಿ ಉದ್ಯಮಿ. L.T. ಅಬ್ದುಲ್ ರಝಾಕ್ ಹಾಜಿ ರವರು ಅರ್ಹ ಕುಟುಂಬಕ್ಕೆ ಈದ್ ಕಿಟ್ ವಿತರಿಸಿದರು. ಎಐಕೆಎಂಸಿಸಿ ಜಿಲ್ಲಾ ಸಮಿತಿಯ ಸದಸ್ಯರು ಪುತ್ತೂರು ಘಟಕದ ಸಲಹೆಗಾರ ಅಫ್ವಾನ್ ತಂಙಳ್ ಕರಾವಳಿ ಸಂಘಟನೆಯ ಚಟುವಟಿಕೆಗಳ ಬಗ್ಗೆ ವಿವರಿಸಿ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಸದಸ್ಯರನ್ನು ಸೇರ್ಪಡೆಗೊಳಿಸಿ ಪ್ರಬಲ ಸಮಿತಿ ರಚೀಸಲಾಗುವುದು ಎಂದ ಅವರು 18 ವರ್ಷ ಪ್ರಾಯ ತುಂಬಿದ ಎಲ್ಲಾ ಯುವಕರು ಮತ್ತು ಹಿರಿಯರು ಸದಸ್ಯರಾಗಿ ಕೈಜೋಡಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರು ಎಐಕೆಎಂಸಿಸಿ ಘಟಕದ ಅಧ್ಯಕ್ಷ ಅಬೂಬಕ್ಕರ್ ಮುಲಾರ್ ರವರು ಮಾತನಾಡಿ ಮುಂದಿನ ಬಕ್ರಿದ್ ಹಬ್ಬಕ್ಕೆ ನಮ್ಮ ಮನೆಯಲ್ಲಿ ನಮ್ಮ ಮಕ್ಕಳಿಗೆ ಹಬ್ಬದ ದಿನ ಇರುವ ಆಹಾರ ಬಡವರಮನೆಯ ಮಕ್ಕಳ ಮನೆಯಲ್ಲಿಯೂಇರಬೇಕು ಎಂಬ ಭಾವನೆಯಿಂದ ತಾಲೂಕಿನಾದ್ಯಂತ ಇನ್ನಷ್ಟು ಹೆಚ್ಚಿನ ಆಹಾರ ಸಾಮಗ್ರಿಗಳನ್ನು ರೂಡಿಗರಿಸಿ ಹಂಚುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ಮಹತ್ಕಾರ್ಯಕ್ಕೆ ಹೆಚ್ಚಿನ ದಾನಿಗಳು ಸಹಕರಿಸಿ ಕೈಜೋಡಿಸುವಂತೆ ಮನವಿ ಮಾಡಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಮಧುರಾ ಮರೀಲ್ ಸ್ವಾಗತಿಸಿ ಮಾತನಾಡಿ ಎಲ್ಲರ ಸಹಕಾರವನ್ನು ಕೋರಿದರು. ಕೋಶಾಧಿಕಾರಿ ಅಬ್ದುಲ್ ಅಝೀಝ್ ಬಪ್ಪಳಿಗೆ. ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.










