ಹನುಮಗಿರಿ ಬ್ರಹ್ಮಕಲಶೋತ್ಸವ : ಮಾಡ್ನೂರು ಗ್ರಾಮ ಸಮಿತಿಯಿಂದ ರಾಮ ತಾರಕ ಜಪ

0

ಕಾವು: ಎ.9ರಿಂದ 12ರವರೆಗೆ ನಡೆಯಲಿರುವ ಶ್ರೀಕ್ಷೇತ್ರ ಹನುಮಗಿರಿಯ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ದೇವರ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆಯುತ್ತಿರುವ ಕೋಟಿ ಶ್ರೀರಾಮ ತಾರಕ ಮಹಾಯಜ್ಞದ ಸಲುವಾಗಿ ಮಾ.19ರಂದು ಅಪರಾಹ್ನ ಶ್ರೀಕ್ಷೇತ್ರದಲ್ಲಿ ಮಾಡ್ನೂರು ಗ್ರಾಮಸಮಿತಿಯಿಂದ ರಾಮ ತಾರಕ ಜಪ ನಡೆಯಿತು.

ಮಾಡ್ನೂರು ಗ್ರಾಮ ಸಮಿತಿಯ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡ, ಕಾರ್ಯದರ್ಶಿ ಬಾಲಕೃಷ್ಣ ಕೆದಿಲಾಯ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು, ಭಜನಾ ತಂಡದ ಸದಸ್ಯರು, ಗ್ರಾಮದ ಭಕ್ತಾದಿಗಳು ರಾಮ ತಾರಕ ಜಪದಲ್ಲಿ ಪಾಲ್ಗೊಂಡರು.


ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ನಹುಷ ಭಟ್ ಪಳನೀರು, ಧರ್ಮದರ್ಶಿ ಶಿವರಾಂ ಪಿ ಸೇರಿದಂತೆ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here