






ಪುಣಚ: ಪುಣಚ ಪರಿಯಾಲ್ತಡ್ಕ ಜಂಕ್ಷನ್’ನಲ್ಲಿ ಡ್ರೆಸ್ಸ್’ಗಳು ಫೂಟ್’ವೇರ್’ಗಳು ಹಾಗೂ ಮಹಿಳೆಯರ ಟೈಲರಿಂಗ್’ಗಳನ್ನೊಳಗೊಂಡ ಸಾನಿಧ್ಯ ಡ್ರೆಸ್ಸಸ್ ಮಾ.20ರಂದು ಶುಭಾರಂಭಗೊಂಡಿತು.


ಬೆಳಿಗ್ಗೆ ಪುಣಚ ದೇವಾಲಯದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರ ನೇತೃತ್ವದಲ್ಲಿ ದೀಪ ಬೆಳಗಿಸಿ ಪ್ರಾರ್ಥನೆಯೊಂದಿಗೆ ಮಹಾಗಣಪತಿ ಹೋಮ, ಪ್ರಸಾದ ವಿತರಣೆ ನಡೆಯಿತು. ಗಣ್ಯರು, ಅಂಗಡಿ ಮಳಿಗೆಗಳ ಮಾಲಕರು ಸೇರಿದಂತೆ ಹಲವಾರು ಮಿತ್ರರು, ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು.



ಮಾಲಕರ ತಂದೆ ಮಾಂಕು ನಾಯ್ಕ ಪಟಿಕಲ್ಲು, ತಾಯಿ ಲೀಲಾವತಿ, ಪತ್ನಿ ಪ್ರಶಾಂತಿ ಬಾಲಕೃಷ್ಣ, ಪುತ್ರಿ ಸಾನಿಧ್ಯ, ಸಹೋದರ ರವಿ, ಅವರ ಪುತ್ರ ಭವಿತ್, ಸಹೋದರಿ ಕಲಾವತಿ, ಅವರ ಮಕ್ಕಳಾದ ರಕ್ಷಿತ್, ರಶ್ಮಿತಾ ಹಾಗೂ ಲಲಿತ ಪಟಿಕಲ್ಲು, ಈಶ್ವರ ನಾಯ್ಕ ಶೇವಿರೆ, ಲಕ್ಷ್ಮೀ ಶೇವಿರೆ, ಉದಯ ಮೂಡಾಯಿಬೆಟ್ಟು ಹಾಗೂ ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕ ಬಾಲಕೃಷ್ಣ ಪಟಿಕಲ್ಲು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ, ನಮ್ಮ ಸಂಸ್ಥೆಯಲ್ಲಿ ಮಕ್ಕಳ, ಮಹಿಳೆಯರ, ಪುರುಷರ ವಿವಿಧ ಬಗೆಯ ಡ್ರೆಸ್’ಗಳು, ಫೂಟ್’ವೇರ್’ಗಳು ಹಾಗೂ ಮಹಿಳೆಯರ ವಿವಿಧ ವಿನ್ಯಾಸಗಳನ್ನೊಳಗೊಂಡ ಟೈಲರಿಂಗ್’ಗಳು ನಮ್ಮಲ್ಲಿ ಲಭ್ಯವಿದೆ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.










