ಕುಂಬ್ರದಲ್ಲಿ ಸಡಗರದ ಈದುಲ್ ಫಿತರ್

0

ಸಾರ್ವಜನಿಕರಿಗೆ ಸಿಹಿ ಆತಿಥ್ಯ ನೀಡಿದ ಯುವಕರು


ಪುತ್ತೂರು: ಕುಂಬ್ರ ಬದ್ರಿಯಾ ನಗರ ಬದ್ರಿಯಾ ಜುಮಾ‌ ಮಸೀದಿಯಲ್ಲಿ ಸಂಭ್ರಮದ ಈದುಲ್ ಫಿತರ್ ಆಚರಣೆ ನಡೆಯಿತು.

ತಯ್ಯಿಬ್ ಮಳ್ಹರಿ ಈದ್ ನಮಾಝ್ ನೇತೃತ್ವ ವಹಿಸಿದ್ದರು.‌ಜಮಾತ್ ಸದಸ್ಯರು,ಮಕ್ಕಳು ಹೊಸ‌ ಬಟ್ಟೆ ಧರಿಸಿ ಈದ್ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.‌ಈದ್ ಸಾಮೂಹಿಕ ಪ್ರಾರ್ಥನೆಯ ಬಳಿಕ ಸಿಹಿ‌ ವಿತರಣೆ ನಡೆಯಿತು.ಜಮಾತಿನ‌ ಅಲ್ ಬದ್ರಿಯಾ ಸಮಿತಿ ವತಿಯಿಂದ ಸಾರ್ವಜನಿಕರಿಗೆ ಸಿಹಿ ಪಾಯಸ,ಹೋಳಿಗೆ ವಿತರಣೆ ನಡೆಯಿತು.


ಜಮಾತ್ ಕಮಿಟಿ‌ ಅಧ್ಯಕ್ಷ ಇಸ್ಮಾಯಿಲ್‌ಮಗಿರೆ, ಕಾರ್ಯದರ್ಶಿ ಮಹಮ್ಮದ್‌ಕಡ್ತಿಮಾರ್, ಉಪಾಧ್ಯಕ್ಷ ಯೂಸುಫ್ ಕಡ್ತಿಮಾರ್,ಜತೆ‌ಕಾರ್ಯದರ್ಶಿ ಶರೀಫ್ ,ಕೋಶಾಧಿಕಾರಿ ಇಸ್ಮಾಯಿಲ್ ,ಮಾಜಿ ಅಧ್ಯಕ್ಷ ಹಮೀದ್ ಕೊಯಿಲ, ಉಸ್ಮಾನ್‌ಮುಸ್ಲಿಯಾರ್ ಶಾಂತಿಯಡಿ, ಇಸ್ಮಾಯಿಲ್ ಕೋಳಿಗದ್ದೆ,ಅದ್ರಾಮ‌ ಕೊಯಿಲ, ಯಂಗ್ ಮೆನ್ಸ್ ಅಧ್ಯಕ್ಷ ಆಸಿಫ್ ಕಡ್ತಿಮಾರ್ ,ಪ್ರಮುಖರಾದ ಸಾದಿಕ್ ಮಗಿರೆ, ಫಾರೂಕ್ ಕಡ್ತಿಮಾರ್, ಸಾದಿಕ್ ಹಿಮಮಿ‌ಕಡ್ತಿಮಾರ್, ಬಶೀರ್ ಕಡ್ತಿಮಾರ್, ನಾಸಿರ್ ಬದ್ರಿಯಾನಗರ,ರಫೀಕ್ ಕಡ್ತಿಮಾರ್ ,ಹಾರಿಸ್ ಕೋಳಿಗದ್ದೆ, ನವಾಝ್ ಅಬ್ಬಾಸ್ ಕುರಿಯ,ಮೊದಲಾದವರು ಭಾಗವಹಿದ್ದರು.

LEAVE A REPLY

Please enter your comment!
Please enter your name here