







ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ಬ್ರಹ್ಮಕಲಶೋತ್ಸವ ಮಾ.25 ರಿಂದ ಎ.2 ರ ತನಕ ನಡೆಯಲಿದ್ದು ಬ್ರಹ್ಮಕಲಶೋತ್ಸವದ ಶುಭ ಸಂದರ್ಭದಲ್ಲಿ ಶ್ರೀದೇವಿಗೆ ಸಮರ್ಪಣೆಗೊಳ್ಳಲಿರುವ ಒಟ್ಟು 38.5 ಅಡಿ ಎತ್ತರದ ಬ್ರಹ್ಮರಥ,ದೇವಾಡಿಗ ಸುಧಾರಕ ಸಂಘದ ವತಿಯಿಂದ ಕೊಡುಗೆಯಾಗಿ ನೀಡಿದ ಅಂದಾಜು 35 ಲಕ್ಷವೆಚ್ಚದ 15 ಅಡಿ ಎತ್ತರದ ಪುಷ್ಪ ರಥದ ಬೃಹತ್ ಮೆರವಣಿಗೆ ಅಲಂಕಾರು ಪೇಟೆಯಿಂದ ಪೂರ್ಣಕುಂಭ,ಚೆಂಡೆ ವಾದ್ಯ, ವಾಹನಜಾಥ ಮತ್ತು ಕುಣಿತ ಭಜನೆಯೊಂದಿಗೆ ಆಲಂಕಾರು ಪೇಟೆಯಿಂದ ಶ್ರೀ ಕ್ಷೇತ್ರ ಶರವೂರಿಗೆ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.



ದೇವಸ್ಥಾನದ ಪ್ರದಾನ ಆರ್ಚಕರಾದ ಹರಿಪ್ರಸಾದ್ ಉಪಾಧ್ಯಾಯ, ರಾಘವೇಂದ್ರ ಪ್ರಸಾದ್ ಭಟ್ ರವರು ಪ್ರಾರ್ಥನೆ ಸಲ್ಲಿಸಿ ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.




ಈ ಸಂಧರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ ಮತ್ತು ಸದಸ್ಯರು ,ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಡಾ| ಹೇಮಂತ್ ರೈ,ಮನವಳಿಕೆಗುತ್ತು ಸರ್ವ ಸದಸ್ಯರು ,ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಪಡ್ಡಿಲ್ಲಾಯ ಸರ್ವ ಸದಸ್ಯರು ಬ್ರಹ್ಮಕಲಶೋತ್ಸವ ಸಮಿತಿಯ ವಿವಿಧ ಪದಾಧಿಕಾರಿಗಳು ಸೇರಿದಂತೆ ಭಕ್ತಾಧಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.










