ಪುತ್ತೂರಿನಲ್ಲಿ ಶಾಸ್ತಾ ಕನ್ಸಲ್ಟೆನ್ಸಿ ಶುಭಾರಂಭ

0

ಸಂಸ್ಥೆಯ ಮೇಲಿನ ನಂಬಿಕೆ ಯಶಸ್ಸಿಗೆ ದಾರಿ – ಕಿಶೋರ್ ಕುಮಾರ್ ಪುತ್ತೂರು
ಶ್ರದ್ದೆ, ಬದ್ಧತೆ, ಪ್ರಾಮಾಣಿಕತೆ ವ್ಯಕ್ತಿ ಎತ್ತರಕ್ಕೇರಲು ದಾರಿ – ರವೀಂದ್ರ ಪಿ

ಪುತ್ತೂರು: ಜಮೀನು ಯಾ ಕಟ್ಟಡಕ್ಕೆ ಸಂಬಂಧಿಸಿ ಪ್ಲ್ಯಾನ್, ಡಿಸೈನ್, ಕನ್‌ಸ್ಟ್ರಕ್ಷನ್, ಇಂಟೀರಿಯರ್ ಸಹಿತ ಎಲ್ಲಾ ಸೇವೆಗಳನ್ನು ತ್ವರಿತಗತಿಯಲ್ಲಿ ನೀಡುವ ಉದ್ದೇಶವಿಟ್ಟುಕೊಂಡು ರಾಜೇಶ್ ಕಲ್ಲೇಗ ಅವರ ಮಾಲಕತ್ವದಲ್ಲಿ ಶಾಸ್ತಾ ಕನ್ಸಲ್ಟೆನ್ಸಿ ಸಂಸ್ಥೆ ಮಾ.20ರಂದು ಪುತ್ತೂರು ಸೆಂಟರ್ ಕಾಂಪ್ಲೆಕ್ಸ್‌ನ ಕೆಳ ಅಂತಸ್ತಿನಲ್ಲಿ ಶುಭಾರಂಭಗೊಂಡಿತು. ಭಾರತ ಮಾತೆಯ ಭಾವಚಿತ್ರದ ಎದುರು ಪುಪ್ಪಾರ್ಚನೆಯೊಂದಿಗೆ ಸಂಸ್ಥೆಯನ್ನು ಉದ್ಘಾಟಿಸಲಾಯಿತು.


ಸಂಸ್ಥೆಯ ಮೇಲಿನ ನಂಬಿಕೆ ಯಶಸ್ಸಿಗೆ ದಾರಿ:
ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಂಸ್ಥೆಗೆ ಶುಭ ಹಾರೈಸಿ ಮಾತನಾಡಿ, ಸಂಸ್ಥೆಯ ಮೇಲಿನ ನಂಬಿಕೆಯಿಟ್ಟು ಬಂದವರ ಕನಸು ನನಸಾಗುವಂತ ರೀತಿಯಲ್ಲಿ ರಾಜೇಶ್ ಅವರು ಸೇವೆ ನೀಡಲಿದ್ದಾರೆ. ಇದು ಸಂಸ್ಥೆಯ ಯಶಸ್ವಿಗೆ ದಾರಿಯಾಗಲಿದೆ. ಈ ಸಂಸ್ಥೆಯ ಮೂಲಕ ಪುತ್ತೂರಿನ ಜನರಿಗೆ ಉತ್ತಮ ಸೇವೆ ಸಿಗಲಿ ಎಂದು ಹಾರೈಸಿದರು.


ಶ್ರದ್ದೆ, ಬದ್ಧತೆ, ಪ್ರಾಮಾಣಿಕತೆ ವ್ಯಕ್ತಿ ಎತ್ತರಕ್ಕೇರಲು ದಾರಿ:
ಸಂಸ್ಥೆಯನ್ನು ಉದ್ಘಾಟಿಸಿದ ದಕ್ಷಾ ಕನ್‌ಸ್ಟ್ರಕ್ಷನ್‌ನ ಮಾಲಕ ರವೀಂದ್ರ ಪಿ ಅವರು ಮಾತನಾಡಿ, ವ್ಯಕ್ತಿ ಎತ್ತರಕ್ಕೆ ಏರಬೇಕಾದರೆ ಜ್ಞಾನ, ಪ್ರತಿಭೆಗಿಂತ ಗುಣ ಮುಖ್ಯ. ಅದೇ ರೀತಿ ರಾಜೇಶ್ ಅವರಲ್ಲಿ ಎತ್ತರಕ್ಕೆ ಏರಬೇಕಾದ ಗುಣವಿದೆ. ಶ್ರದ್ಧೆ, ಬದ್ಧತೆ, ಪ್ರಾಮಾಣಿಕತೆ ಅವರಲ್ಲಿ ಇದೆ. ಹಾಗಾಗಿ ಸಂಸ್ಥೆ ಎತ್ತರಕ್ಕೆ ಏರಲಿದೆ. ಇವತ್ತು ಆರ್ಥಿಕತೆಯ ಹಂಬಲ ಬೇಕು. ಆದರೆ ಅದು ಧರ್ಮದಲ್ಲಿ ಸಂಪಾದನೆಯಾಗಲಿ ಎಂದರು.


ಸ್ನೇಹಿತ ಯಶಸ್ಸನ್ನು ಕಾಣಲಿ:
ಬಿಗ್ ಬಾಸ್ ಖ್ಯಾತಿಯ ಧನ್‌ರಾಜ್ ಆಚಾರ್ಯ ಅವರು ಮಾತನಾಡಿ ರಾಜೇಶ್ ನನ್ನ ಗೆಳೆಯ. ನಾವೊಂದು ಐದು ಮಂದಿ ಸೇರಿಕೊಂಡು ಎಲ್ಲೆ ಹೋದರು ಕಷ್ಟ ಸುಖ ಹಂಚಿಕೊಳ್ಳುತ್ತೇವೆ. ಅಂತಹ ಸ್ನೇಹಿತನ ನೂತನ ಸಂಸ್ಥೆ ಯಶಸ್ಸನ್ನು ಕಾಣಲಿ ಎಂದು ಹಾರೈಸಿದರು.


ಹಸ್ತಾಕ್ಷರಿಂದ ಶುಭಾಶಯ
ಸಂಸ್ಥೆಯಲ್ಲಿ ಅಳವಡಿಸಿದ ಬಿಳಿ ಹಾಳೆಯ ಪಲಕದಲ್ಲಿ ಅತಿಥಿ ಗಣ್ಯರು ತಮ್ಮ ಹಸ್ತಾಕ್ಷರಿಂದ ಶುಭಾಶಯದ ನುಡಿಯನ್ನು ಬರೆದು ಸಹಿ ಹಾಕಿ ಶುಭ ಹಾರೈಸಿದರು. ಸಂಸ್ಥೆಯ ಮಾಲಕ ರಾಜೇಶ್ ಕಲ್ಲೇಗ ಅವರು ಮಾತನಾಡಿ, ಸಂಸ್ಥೆಯಲ್ಲಿ ಸಿಗುವ ಸೇವೆಗಳ ಬಗ್ಗೆ ವಿವರಿಸಿ ಕೃತಜ್ಞೆ ಸಲ್ಲಿಸಿದರು. ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ರಾಜೇಶ್ ಅವರ ತಾಯಿ ಪ್ರೇಮ, ಅಣ್ಣ ಗಣೇಶ್, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕ ವಿಜಯನಾರಾಯಣ, ವಕೀಲರಾದ ವಿರೂಪಾಕ್ಷ ಭಟ್, ಅರುಣ್, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವ ಕುಮಾರ್ ಪಿ ಬಿ, ನಾಗೇಂದ್ರ ಬಾಳಿಗ, ಶಶಿಧರ್ ನಾಯಕ್, ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷ ನಿತೇಶ್ ಕಲ್ಲೇಗ, ಸಂಕಪ್ಪ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ರವಿ ಮುಂಗ್ಲಿಮನೆ, ವಿಶ್ವನಾಥ ಗೌಡ ಕೆಯ್ಯೂರು, ಮುರಳಿಕೃಷ್ಣ ಹಸಂತಡ್ಕ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಒಂದೇ ಸೂರಿನಡಿ ಎಲ್ಲಾ ಸೇವೆ
ಹಳ್ಳಿಯಿಂದ ಬಂದವರಿಗೆ ಜಮೀನು, ಕಟ್ಟಡ ಸಂಬಂಧಿಸಿ ಅಳೆದಾಡುವ ಪರಿಸ್ಥಿತಿ ಇದೆ. ಅಂತಹ ಸಂದರ್ಭದಲ್ಲಿ ಅವರೆಲ್ಲರಿಗೂ ಒಂದೇ ಸೂರಿನಡಿಯಲ್ಲಿ ಉತ್ತಮ ಸೇವೆ ಶಾಸ್ತಾ ಕನ್ಸಲ್ಟೆನ್ಸಿಯಲ್ಲಿ ಸಿಗಲಿದೆ.
ರವೀಂದ್ರ ಪಿ ದಕ್ಷಾ ಕನ್‌ಸ್ಟ್ರಕ್ಷನ್ಸ್

ಸಂಸ್ಥೆಯ ಸೇವೆಗಳು:
ಪ್ಲ್ಯಾನ್, ಡಿಸೈನ್, ಕನ್‌ಸ್ಟ್ರಕ್ಷನ್, ಇಂಟೀರಿಯರ್ ಸೇವೆಯನ್ನು ನೀಡುವ ಉದ್ದೇಶವಿಟ್ಟುಕೊಂಡು ಎಲ್ಲರಿಗೂ ಉತ್ತಮ ಸೇವೆ ನೀಡಲಾಗುವುದು. ಬಿಲ್ಡಿಂಗ್ ಪ್ಲ್ಯಾನ್ ಮತ್ತು ಅಪ್ರೂವಲ್, ಸಿಂಗಲ್‌ಸೈಟ್ ಪ್ಲ್ಯಾನ್, 9.11 ಪ್ಲ್ಯಾನ್, ಅಪ್ರೂವಲ್, ಕಟ್ಟಡದ ಡಿಸೈನ್, ಕನ್‌ಸ್ಟ್ರಕ್ಷನ್ ಹಾಗು ಸೈಟ್ ಸೂಪರ್‌ವೈಸಿಂಗ್, ಇಂಟೀರಿಯರ್ ಡಿಸೈನ್, ಎಸ್ಟಿಮೇಟ್ ಮತ್ತು ವ್ಯಾಲ್ಯೂವೇಷನ್, ರಿನೋವೇಶನ್ ವರ್ಕ್, 3ಡಿ ಡಿಸೈನ್ ಸೇವೆಗಳನ್ನು ನೀಡಲಾಗುವುದು.

LEAVE A REPLY

Please enter your comment!
Please enter your name here