ಗಂಡಿಬಾಗಿಲು ಮಸೀದಿಯಲ್ಲಿ ಸಂಭ್ರಮದ ಈದ್-ಉಲ್-ಫಿತರ್ ಆಚರಣೆ

0

ರಾಮಕುಂಜ: ಗಂಡಿಬಾಗಿಲು ಜುಮಾ ಮಸೀದಿಯಲ್ಲಿ ನಡೆದ ಈದ್ ಉಲ್ ಫಿತರ್ ಹಬ್ಬ ಆಚರಣೆಯಲ್ಲಿ ಮಸೀದಿ ಖತೀಬ್ ಅಬ್ದುಲ್ ರಜಾಕ್ ಸುಲ್ತಾನ್ ದಾರಿಮಿ ಖುತುಬಾ ಪಾರಾಯಣ, ವಿಶೇಷ ನಮಾಜು ಮತ್ತು ಪ್ರಾರ್ಥನೆ ನೆರವೇರಿಸಿ ಹಬ್ಬದ ಸಂದೇಶ ನೀಡಿ, ಹಬ್ಬದ ಸಂಭ್ರಮದಲ್ಲಿ ಇನ್ನೊಬ್ಬರಿಗೆ ತೊಂದರೆ ಆಗ ಕೂಡದು. ಅನ್ಯರನ್ನು ದೂಷಿಸದೆ, ಅನಾಥರು, ಅಸಹಾಯಕರಿಗೆ ಸಹಾಯಹಸ್ತ ನೀಡಿ ಅವರನ್ನು ಸಂತೃಪ್ತಿ ಪಡಿಸುವ ಮೂಲಕ ಅಲ್ಲಾಹನ ಪ್ರೀತಿ ಪಾತ್ರರಾಗಬೇಕು ಎಂದರು.

ಹಿರಿಯರು, ಕಿರಿಯರೆನ್ನದೆ ಹೊಸ ಬಟ್ಟೆ ಧರಿಸಿದ ಮುಸ್ಲಿಂ ಬಾಂಧವರು ಹಬ್ಬದ ಸಂಭ್ರಮದಲ್ಲಿ ಮೆರೆದರು. ಮಸೀದಿಯಲ್ಲಿ ನಡೆದ ನಮಾಜು, ಪ್ರಾರ್ಥನೆಯ ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಸಂದೇಶವನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

LEAVE A REPLY

Please enter your comment!
Please enter your name here