






ರಾಮಕುಂಜ: ಸುಬ್ರಹ್ಮಣ್ಯ ಕೆ.ಎಸ್.ಎಸ್.ಕಾಲೇಜಿನ ವಿದ್ಯಾರ್ಥಿನಿ ಮಯೂರಿ ಎಂ.ಜಿ.ಅವರು ಮಂಗಳೂರು ವಿವಿ ಅಂತಿಮ ಬಿ.ಕಾಂ. ಪದವಿ ಪರೀಕ್ಷೆಯಲ್ಲಿ 9ನೇ ರ್ಯಾಂಕ್ ಪಡೆದಿದ್ದಾರೆ.


ರಾಮಕುಂಜ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಹಳೆವಿದ್ಯಾರ್ಥಿನಿಯಾಗಿರುವ ಈಕೆ ನಿವೃತ್ತ ಸಂಸ್ಕೃತ ಶಿಕ್ಷಕ, ರಾಮಕುಂಜ ಗ್ರಾಮದ ರಾಮಕುಂಜ ನಿವಾಸಿ ದಿ. ಮುರಾರಿ ಗುಬ್ಬಿ ಹಾಗೂ ಕುಸುಮ ದಂಪತಿ ಪುತ್ರಿ.













