ಬೆದ್ರಾಳ ಹೌಸ್ ರೋಡ್ ಪರಿಸರದಲ್ಲಿ ಕುಡಿಯಲು ನೀರಿಲ್ಲ! – ಸಮಸ್ಯೆ ಪರಿಹರಿಸಲು ಸ್ಥಳೀಯರ ಆಗ್ರಹ

0

ಪುತ್ತೂರು: ನಗರಸಭಾ ವ್ಯಾಪ್ತಿಯ ಬೆದ್ರಾಳದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವ ಕುರಿತು ದೂರು ವ್ಯಕ್ತವಾಗಿದೆ.


ಬೆದ್ರಾಳ ಹೌಸ್ ರೋಡ್ ರಸ್ತೆಯಲ್ಲಿರುವ ಸುಮಾರು ಹದಿನೈದು ಮನೆಗಳಿಗೆ ಕುಡಿಯುವ ನೀರಿನ ಸರಬರಾಜಿನಲ್ಲಿ ಪದೇ ಪದೇ ವ್ಯತ್ಯಯ ಉಂಟಾಗುತ್ತಿದೆ. ಫಲಾನುಭವಿಗಳು ದೂರು ನೀಡಿದಾಗ ಒಮ್ಮೆ ಸಮಸ್ಯೆ ಸರಿಯಾಗುತ್ತದೆ. ಮತ್ತೆ ಅದೇ ಸಮಸ್ಯೆ ಮುಂದುವರಿಯುತ್ತಿದೆ. ಇದೀಗ ಮಾ.17ರಿಂದ ಕುಡಿಯುವ ನೀರಿನ ಸಮಸ್ಯೆ ನಿರಂತರವಾಗಿದೆ. ಜನವಸತಿ ಪ್ರದೇಶವಾಗಿರುವ ಬೆದ್ರಾಳ ಹೌಸ್ ರೋಡ್ ವ್ಯಾಪ್ತಿಯಲ್ಲಿ ನಿರಂತರವಾಗಿ ಎದುರಾಗುತ್ತಿರುವ ಈ ಸಮಸ್ಯೆಗೆ ಸಂಬಂಧಿಸಿದವರು ಪರಿಹಾರ ಒದಗಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here