







ಶೀಘ್ರ ದುರಸ್ಥಿಪಡಿಸದಿದ್ದಲ್ಲಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರಕ್ಕೆ ನಿರ್ಧಾರ


ಕೊಡಿಯಾಲ: ಕೊಡಿಯಾಲ – ಕಾಣಿಯೂರು ಸಂಪರ್ಕ ರಸ್ತೆ ತೀವ್ರ ಹದಗೆಟ್ಟಿದ್ದು ಸಾರ್ವಜನಿಕರ ಸಂಚಾರ ದುಸ್ಮರವಾಗಿದೆ. ಹದಗೆಟ್ಟ ರಸ್ತೆಯಲ್ಲಿ ಅನಿವಾರ್ಯವಾಗಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪ್ರತಿದಿನ ಈ ರಸ್ತೆಯಲ್ಲಿ ಶಾಲಾ ಮಕ್ಕಳು, ವಯೋವೃದ್ಧರು, ವಾಹನ ಸವಾರರು ಜೀವ ಭಯದಲ್ಲೇ ಸಂಚರಿಸಬೇಕಾಗಿದೆ. ಗುಂಡಿ-ಗುಂಡಿಯಾದ ರಸ್ತೆಯಿಂದಾಗಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ.
ಇಲ್ಲಿ ಡಾಮರು ರಸ್ತೆ ಕಿತ್ತು ಹೋಗಿದ್ದು ಜಲ್ಲಿ ಕಲ್ಲುಗಳು ಹರಡಿವೆ, ಮಳೆಗಾಲದಲ್ಲಿ ರಸ್ತೆ ಕೆಸರುಮಯವಾಗಿದ್ದು ಇಲ್ಲಿ ವಾಹನಗಳು ಸಂಚರಿಸುವುದಿಲ್ಲ, ಬೈಕ್ ಸವಾರರೂ ಹರಸಾಹಸ ಪಡಬೇಕಾಗಿದೆ.



ಶಾಲಾ ವಾಹನಗಳು ಕೂಡ ಈ ರಸ್ತೆಯಲ್ಲಿ ಸಂಚರಿಸದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ಸಮಸ್ಯೆ ಯಾಗಿದೆ. ವಾಹನಗಳು ಸುತ್ತು ಇದರಿಂದ ಹೆಚ್ಚು ಸಮಯ ಬೇಕಾಗುತ್ತದೆ.
ಹೊಂಡ ಗುಂಡಿ ನಿರ್ಮಾಣವಾದ ರಸ್ತೆಯನ್ನು ಇತ್ತೀಚೆಗೆ ಪಂಚಾಯತ್ ವತಿಯಿಂದ ರಸ್ತೆಯನ್ನು ಜೆಸಿಬಿ ಮುಖಾಂತರ ಸಮತಟ್ಟು ಗೊಳಿಸಲಾಯಿತು.
ಆದರೆ ರಸ್ತೆ ಮಳೆ ಬಂದರೆ ಕೆಸರುಮ ಯವಾಗಿ ವಾಹನಗಳು ಈ ರಸ್ತೆಯಲ್ಲಿ ಸಂಚಾರವನ್ನೇ ನಿಲ್ಲಿಸಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಈ ಬಗ್ಗೆ ಶಾಸಕರಿಗೆ ರಸ್ತೆ ಡಾಮರೀಕರಣದ ಬಗ್ಗೆ ಮನವಿಗಳನ್ನು ನೀಡಲಾಗಿದೆ. ಇನ್ನೂ ರಸ್ತೆ ದುರಸ್ಥಿಪಡಿಸದಿದ್ದಲ್ಲಿ ಗ್ರಾಮಸ್ಥರೆಲ್ಲರೂ ಮುಂಬರುವ ಮತದಾನವನ್ನು ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ.

ಈ ರಸ್ತೆಯು ಹೊಂಡಗುಂಡಿಗಳಿಂದ ಕೂಡಿದೆ. ಮಳೆ ಬಂದರೆ ಕೆಸರುಮಯ ವಾಗುತ್ತದೆ. ಶಾಲಾ ಮಕ್ಕಳ ವಾಹನಗಳಿಗೆ, ಬಸ್ಸು,ಬೈಕ್ ಸವಾರರಿಗೆ ತೀವ್ರ ತೊಂದರೆಯಾಗಿದೆ. ಹಾಲಿನ ವಾಹನ ಕೂಡ ಈ ರಸ್ತೆಯಲ್ಲಿ ಸಂಚರಿಸುವುದಿಲ್ಲ. ಕೃಷಿಕರಿಗೂ ತೊಂದರೆಯಾಗಿದೆ. ವಾಹನ ಸವಾರರು ಪುಂಚತ್ತಾರು ಸುತ್ತು ಬಳಸಿ ಕಾಣಿಯೂರಿಗೆ ಬರಬೇಕಾಗಿದೆ. ರಸ್ತೆಯನ್ನು ಆದಷ್ಟು ಬೇಗ ದುರಸ್ಥಿಪಡಿಸಬೇಕು.
ಲೋಕೇಶ್ ತಾಳಿತ್ತಡಿ, ಕೊಡಿಯಾಲ
ಕೊಡಿಯಾಲ ಕಾಣಿಯೂರು ರಸ್ತೆ ಹಲವು ವರ್ಷದಿಂದ ದುರಸ್ಥಿ ಇಲ್ಲದೆ ಹೊಂಡ ಗುಂಡಿಗಳಿಂದ ಕೂಡಿದೆ. ಇತ್ತೀಚೆಗೆ ವಾಹನ ಸಂಚಾರಕ್ಕೆ ತೊಂದರೆಯಾಗಿರುವುದನ್ನು ಕಂಡು ರಸ್ತೆ ರಿಪೇರಿಗೆಂದು ಇದ್ದ ಡಾಮರನ್ನು ತೆಗೆಯಲಾಯಿತು. ಆದರೆ ಇಲ್ಲಿಯವರೆಗೆ ಯಾವುದೇ ದುರಸ್ಥಿಯಾಗಿಲ್ಲ, ಶಾಲಾ ಮಕ್ಕಳಿಗೆ ದಿನನಿತ್ಯ ಸಂಚರಿಸುವವರಿಗೆ ತುಂಬಾ ತೊಂದರೆಯಾಗಿದೆ. ರಸ್ತೆಯನ್ನು ಕೂಡಲೇ ದುರಸ್ಥಿಪಡಿಸಬೇಕು.
ಈ ಹಿನ್ನೆಲೆಯಲ್ಲಿ ಈ 4.5 ಕಿ.ಮೀ ರಸ್ತೆಯನ್ನು ಸಂಪೂರ್ಣ ದುರಸ್ತಿಗೊಳಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ಕೊಡಿಯಾಲ ಗ್ರಾಮಸ್ಥರು ನಿರ್ಧರಿಸಿದ್ದೇವೆ.
ಸುಂದರ ಗೌಡ ಪೋಳಾಜೆ










