







ಪುತ್ತೂರು: ಬೊಳುವಾರಿನ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ಶ್ರೀ ರಾಮ ನವಮಿ ಉತ್ಸವದ ಅಂಗವಾಗಿ ಕಾಸರಗೋಡು ಸಮೀಪದ ಕೂಡ್ಲು “ರಾಮಧಾಮ”ದಲ್ಲಿ ತಾಳಮದ್ದಳೆ ಕೂಟ ಪಾರ್ತಿಸುಬ್ಬ ವಿರಚಿತ ” ಶ್ರೀ ರಾಮ ವನಗಮನ” ಎಂಬ ಆಖ್ಯಾನದೊಂದಿಗೆ ಮಾ.27ರಂದು ನಡೆಯಿತು.


ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶರ್ಮ ಕಾಟುಕುಕ್ಕೆ, ಚೆಂಡೆ ಮದ್ದಳೆಗಳಲ್ಲಿ ರಾಜೇಂದ್ರ ಪ್ರಸಾದ್ ಪುಂಡಿಕಾಯಿ ಲಕ್ಷ್ಮೀಶ ಬೇಂಗ್ರೋಡಿ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ (ಕೈಕೇಯಿ), ಕಿಶೋರಿ ದುಗ್ಗಪ್ಪ ನಡುಗಲ್ಲು (ದಶರಥ), ಗಾಯತ್ರಿ ಹೆಬ್ಬಾರ್ ( ಮಂಥರೆ), ಶಾರದಾ ಅರಸ್ (ಶ್ರೀ ರಾಮ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ ,ವಂದಿಸಿದರು. ಕಲಾವಿದ ತೋನ್ಸೆ ಪುಷ್ಕಳ ಕುಮಾರ್ ಪ್ರಶಂಸಾ ನುಡಿಗಳನ್ನಾಡಿದರು. ಹರಿದಾಸ ಮಹಾಬಲ ಶೆಟ್ಟಿ (ದೇವಕೀತನಯ) ಪ್ರಾಯೋಜಿಸಿದರು.













