







ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇದರ ಮೂವತ್ತರ ಸಂಭ್ರಮದ ಪ್ರಯುಕ್ತ ನೃತ್ಯಾಂತರಂಗ 139ರಲ್ಲಿ ನೃತ್ಯಾರ್ಚನೆ ಕಾರ್ಯಕ್ರಮ ಮಾ.28ರಂದು ಸಂಜೆ ದರ್ಬೆ ಶಶಿ ಶಂಕರ ಸಭಾಂಗಣದಲ್ಲಿ ನಡೆಯಲಿದೆ.
ವಿದ್ವಾನ್ ದೀಪಕ್ ಕುಮಾರ್ ಅವರ ಶಿಷ್ಯರಾಗಿರುವ ಹರ್ಷಿತ ಕುಶಾಲಪ್ಪ ದೆಹಲಿ ಮತ್ತು ಅಂಕಿಕ ಪ್ರಜ್ವಲ್ ಎನ್ ಆರ್ ಪುರ ಅವರು ನೃತ್ಯಕಾರ್ಯಕ್ರಮ ನೀಡಲಿದ್ದಾರೆ. ಕಡಬ ವಿಶ್ವಮೋಹನ ನೃತ್ಯ ಕಲಾಶಾಲೆಯ ವಿದುಷಿ ಮಾನಸ ಪುನೀತ್ ರೈ ಅವರು ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.












