ಬುರೂಜ್ ಶಾಲೆಯಲ್ಲಿ ಬೇಸಿಗೆ ಶಿಬಿರ

0


ಪುತ್ತೂರು: ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ರಝಾನಗರ ಕಲಾ ಬಾಗಿಲು ಬಂಟ್ವಾಳ ಇಲ್ಲಿ ಮುಂದಿನ ಐದು ದಿನಗಳಲ್ಲಿ ನಡೆಯುವ ಸ್ಕೌಟ್ಸ್,ಗೈಡ್ಸ್,ಕಬ್ಸ್ ಮತ್ತು ಬುಲ್ ಬುಲ್ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭ ಶಾಲಾ ಮೈದಾನದಲ್ಲಿ ನಡೆಯಿತು.

ಈ ಶಿಬಿರದ ಉದ್ಘಾಟನೆಯನ್ನು ಇರ್ವತ್ತೂರು ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರು ಹಾಗೂ ಶಾಲಾ ಪೋಷಕರಾದ ಶ್ರೀ ಶಂಕರ ಶೆಟ್ಟಿ ಬೆದ್ರ್ ಮಾರ್ ಬಲೂನ್ ಒಡೆದು ಶಿಬಿರದ ಬ್ಯಾನರ್ ಅಳವಡಿಸುವುದರ ಮೂಲಕ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಬುರೂಜ್ ಶಾಲೆಯಲ್ಲಿ ಎಲ್ಲಾ ಪಠ್ಯೇತರ ಚಟುವಟಿಕೆಗಳು ನಿರಂತರವಾಗಿ ನಡೆಸುತ್ತಿದ್ದು, ಸ್ಕೌಟ್ಸ್ ಮತ್ತು ಗೈಡ್ಸ್ ಅಲ್ಲದೇ ಕರಾಟೆ, ಸ್ಪೋರ್ಟ್ಸ್, ಸಾಂಸ್ಕೃತಿಕ ಚಟುವಟಿಕೆ,ಚಿಂತನಾ ಪ್ರಕಾಶನ,ನವೂದಯ,ಟ್ಯಾಲೆಂಟ್ ಹಂಟ್, ವಿಜ್ಞಾನ ಮಾದರಿ, ಚಿತ್ರಕಲೆ, ಹೊರಚಾರಣ, ಯು.ಪಿ.ಎಸ್.ಸಿ, ಐ ಎ.ಎಸ್, ಐ ಪಿ ಎಸ್, ಪರೀಕ್ಷಾ ತಯಾರಿ ಜಿಲ್ಲಾ ಮೀಫ್ ಸಂಸ್ಥೆಯ ಎಲ್ಲಾ ಕಾರ್ಯಕ್ರಮ ದಲ್ಲಿ ಭಾಗಿಯಾಗಿ ಇಲ್ಲಿಯ ಮಕ್ಕಳು ತುಂಬಾ ಪ್ರತಿಭಾವಂತ ರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಶಾಲೆ ನಮಗಿರುವುದು ನಮಗೆ ತುಂಬಾ ಪ್ರಯೋಜನಕಾರಿಯಾಗಿದೆ.


ಇಲ್ಲಿಯ ಸಂಚಾಲಕರು ಮತ್ತು ಎಲ್ಲಾ ಪ್ರತಿಭಾವಂತ ಶಿಕ್ಷಕರನ್ನು ಅಭಿನಂದಿಸಿ ಮಾತನಾಡಿದರು. ನಂತರ ಶಾಲಾ ಸಂಚಾಲಕ ಶೇಕ್ ರಹ್ಮತ್ತುಲ್ಲಾಹ್ ರವರು ಶಿಬಿರದ ಚಟುವಟಿಕೆ ಬಗ್ಗೆ ಮಾಹಿತಿ ನೀಡಿ ಎಲ್ಲಾ ಮಕ್ಕಳು ಇದರ ಪ್ರಯೋಜನ ಪಡೆಯಲು ಕರೆ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ, ಜಯಶ್ರೀ ಸಾಲ್ಯಾನ್ ಸ್ವಾಗತಿಸಿ, ಪ್ರಾಥಮಿಕ ಮುಖ್ಯ ಶಿಕ್ಷಕಿ ಎಲ್ಸಿ ಲಸ್ರಾದೂ ಕಾರ್ಯಕ್ರಮದ ವಿವರವನ್ನಿತ್ತರು. ಶಿಕ್ಷಕಿ ದಿವ್ಯಾ ಧನ್ಯವಾದ ಸಮರ್ಪಣೆ ಮಾಡಿದರು. ಶಿಕ್ಷಕಿ ಚಂದ್ರಾವತಿ ಕಾರ್ಯಕ್ರಮ ನಿರೂಪಿಸಿದರು. ನಂತರ ಮಕ್ಕಳು ತಮ್ಮ ತಮ್ಮ ಟೆಂಟ್ ಗಳನ್ನು ತಯಾರು ಮಾಡಿ ಅದರೊಳಗೆ ಪ್ರವೇಶ ಮಾಡಿ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here