ಪುಣಚ ಮಹಿಷಮರ್ದಿನಿ ದೇವಸ್ಥಾನದ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ- ಎ.೭7-11 ಜಾತ್ರೋತ್ಸವ ಸಂಭ್ರಮ

0

ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಎ.7ರಿಂದ ಎ.11ವರೆಗೆ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ಕಾರ್ಯವು ಎ.2ರಂದು ಬೈಲುಗುತ್ತುವಿನಲ್ಲಿ ನಡೆಯಿತು.


ಬೆಳಿಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಪೂಜೆ‌ ಬಳಿಕ ಪ್ರಾರ್ಥನೆಯೊಂದಿಗೆ ಗೊನೆ ಮುಹೂರ್ತ ಕಾರ್ಯ ನೆರವೇರಿಸಿದರು.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಗೌರವಾಧ್ಯಕ್ಷ ಎಸ್.ಆರ್. ರಂಗಮೂರ್ತಿ, ಪ್ರ.ಕಾರ್ಯದರ್ಶಿ ಉದಯ ಕುಮಾರ್ ದಂಬೆ, ಸಂಚಾಲಕ ಶ್ರೀಧರ ಶೆಟ್ಟಿ ದೇವರಗುಂಡಿ, ಕೋಶಾಧಿಕಾರಿ ಹರ್ಷ ಎ.ಎಸ್, ಸದಸ್ಯರಾದ ಜಗದೀಶ ಮಾರಮಜಲು, ಗಿರೀಶ್ ಭಟ್ ತೋಟದಮೂಲೆ, ಕಾರ್ತಿಕ್ ಶಾಸ್ತ್ರೀ ಮಣಿಲ, ಕಛೇರಿ ಮ್ಯಾನೇಜರ್ ಲೋಹಿತ್ ಅಜ್ಜಿನಡ್ಕ ಹಾಗೂ ಜಗನ್ನಾಥ ರೈ ಬೈಲುಗುತ್ತು, ಬಾಲಕೃಷ್ಣ ರೈ ಬೈಲುಗುತ್ತು, ಮುರಳಿಧರ ರೈ ಬೈಲುಗುತ್ತು, ರಾಜೇಂದ್ರ ರೈ ಬೈಲುಗುತ್ತು, ಮಹೇಶ್ ಶೆಟ್ಟಿ ಬೈಲುಗುತ್ತು, ಹಾಗೂ ಇತರರು ಉಪಸ್ಥಿತರಿದ್ದರು.


ಎ:7ರಿಂದ ಎ:11ರವರೆಗೆ ಜಾತ್ರೋತ್ಸವ:

ಕ್ಷೇತ್ರದಲ್ಲಿ ಎ.7ರಿಂದ ಎ.11ವರೆಗೆ ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿಗಳ ನೇತ್ರತ್ವದಲ್ಲಿ 5 ದಿವಸದ ಜಾತ್ರೋತ್ಸವವು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ನಡೆಯಲಿದೆ.

LEAVE A REPLY

Please enter your comment!
Please enter your name here