






ಪುತ್ತೂರು: ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆ ಸಂತ ವಿಕ್ಟರ್‌ಬಾಲಿಕಾ ಪ್ರೌಢಶಾಲೆಯ ಮಿನಿಹಾಲ್‌ನಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕರಾದ ವಂ| ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ 84 ವರ್ಷಗಳ ಹಿಂದೆ ಮೊ.ಆಂಟನಿ ಪತ್ರಾವೋರವರು ಕಂಡ ಕನಸು ನನಸಾಗಿ ಸಂಸ್ಥೆಯು ಬೆಳೆಯುತ್ತಾ ಬಂದಿದೆ. ಈ ಸಂಸ್ಥೆಗೆ ಸಾಕಷ್ಟು ಇತಿಹಾಸವಿದೆ, ಅದೆಷ್ಟೋ ಹೆಣ್ಣು ಮಕ್ಕಳಿಗೆ ದಾರಿ ದೀಪವಾಗಿ ಜೀವನವನ್ನು ರೂಪಿಸಲು ಸಹಕಾರಿಯಾಗಿದೆ. ಹಾಗಾಗಿ ಪೂಜ್ಯ ಪತ್ರಾವೋರವರಿಗೆ ಸದಾ ಕೃತಜ್ಞರಾಗಿರಬೇಕು. ಹಿರಿಯ ವಿದ್ಯಾರ್ಥಿನಿಯರು ಶಾಲೆಗೆ ಆಗಾಗ ಭೇಟಿ ನೀಡುವುದರ ಮೂಲಕ ಶಾಲೆಯೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ವಿದ್ಯಾರ್ಥಿನಿಯರು ಇಂತಹ ಸಭೆಗಳಲ್ಲಿ ಭಾಗವಹಿಸುವಂತಾಗಲಿ ಎಂದು ಆರ್ಶೀವದಿಸಿ ಶುಭಹಾರೈಸಿದರು.


ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಹಿರಿಯ ವಿದ್ಯಾರ್ಥಿನಿಯಾಗಿರುವ ರೋಸಲಿನ್ ಲೋಬೊರವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಚಾಲಕರನ್ನು ಹಿರಿಯ ವಿದ್ಯಾರ್ಥಿ ಸಂಘದ ಪರವಾಗಿ ಸನ್ಮಾನಿಸಿದರು. 2025-26ನೇ ಸಾಲಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಇವಾನ್ ಮಸ್ಕರೇನ್ಹಸ್‌ರವರು ಮಾತಾನಾಡಿ ಕಳೆದ ಶೈಕ್ಷಣಿಕ ಸಾಲಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಲು ಸಹಕರಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು.




2026-27ನೇ ಸಾಲಿನ ಹಿರಿಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾದ ಜೆಸಿಂತಾ ಪಿರೇರಾರವರು ಮಾತನಾಡಿ ಸಂಘದ ಕಾರ್ಯಚಟುವಟಿಗಳಿಗೆ ಎಲ್ಲರೂ ಸಹಕಾರ ಕೋರಿದರು. ಶಿಕ್ಷಕಿ ದೀಕ್ಷಾ ಪಿ.ಎನ್‌ರವರು ಮನೋರಂಜನಾ ಆಟಗಳನ್ನು ನಡೆಸಿದರು. ಬಳಿಕ ಬಹುಮಾನ ವಿತರಿಸಿಸಲಾಯಿತು. ಹಿರಿಯ ವಿದ್ಯಾರ್ಥಿನಿಯಾರದ ಅನನ್ಯ ಹಾಗೂ ಭಕ್ತಿಶ್ರೀ ಪ್ರಾರ್ಥಿಸಿದರು. ಸಂಘದ ಉಪ ಕಾರ್ಯದರ್ಶಿ ಸುನಿತಾ ಪಿಂಟೊ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. ಶಿಕ್ಷಕಿ ಭವ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಕು.ಸರಿತಾ ಮೊಂತೇರೊ ವಂದಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ
2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ಜೆಸಿಂತಾ ಪಿರೇರಾ, ಉಪಾಧ್ಯಕ್ಷರಾಗಿ ಫ್ಲ್ಯಾನ್ಸಿ ಸುವಾರಿಸ್, ಕಾಯದರ್ಶಿಯಾಗಿ ಸುನಿತಾ ಪಿಂಟೊ, ಜೊತೆ ಕಾರ್ಯದಶಿಯಾಗಿ ಲೀನಾ ರೇಗೊ, ಕೋಶಾಧಿಕಾರಿಯಾಗಿ ಶೈಲಾ ಮಸ್ಕರೇನ್ಹಸ್‌ರವರನ್ನು ಆಯ್ಕೆ ಮಾಡಲಾಯಿತು.










