






ಪುತ್ತೂರು: ಮಂಜಲ್ಪಡ್ಪುವಿನಲ್ಲಿರುವ ಪುತ್ತೂರು ತೋಟಗಾರಿಕಾ ಇಲಾಖೆಯಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತರಕಾರಿ ಬೀಜಗಳು ಹಾಗೂ ಅರ್ಕ ಮೈಕ್ರೋಬಿಯಲ್ ಕನ್ಸಾರ್ಷಿಯಂ ಗೊಬ್ಬರ ಲಭ್ಯವಿದ್ದು, ಆಸಕ್ತರು ಪಹಣಿ ಪತ್ರ, ಆಧಾರ್ ಪ್ರತಿ, ಪರಿಶಿಷ್ಠ ಜಾತಿ ಮತ್ತು ಪಂಗಡದ ಫಲಾನುಭವಿಗಳಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿ ಎ.18ರ ಒಳಗೆ ಪಡೆದುಕೊಳ್ಳಬಹುದು.


ತರಕಾರಿ ಬೀಜ ಸಾಮಾನ್ಯ ವರ್ಗ, ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದವರಿಗೆ ವಿತರಿಸಲಾಗುತ್ತದೆ. ಅರ್ಕ ಮೈಕ್ರೋಬಿಯಲ್ ಕನ್ಸಾರ್ಷಿಯಂ ಗೊಬ್ಬರ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದವರಿಗೆ ಮಾತ್ರ ವಿತರಿಸಲಾಗುತ್ತದೆ. ರೈತ ಫಲಾನುಭವಿಗಳು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ಕಛೇರಿ ದೂರವಾಣಿ ಸಂಖ್ಯೆ: 08251230905,ಸಹಾಯಕ ತೋಟಗಾರಿಕೆ ನಿರ್ದೇಶಕರು: 9449526117 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.













