







ಅನ್ನಛತ್ರದಲ್ಲಿ ಕೊಪ್ಪರಿಗೆ ಮುಹೂರ್ತ | ಉಗ್ರಾಣ ಉದ್ಘಾಟನೆ


ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಮುದ್ಯ ಪಾರಂತಿ ಶ್ರೀ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಏ.7ರಿಂದ 12ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನವೀಕರಣ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ.




ಬ್ರಹ್ಮಕಲಶೋತ್ಸವದ ಆರು ದಿನವೂ ಮಧ್ಯಾಹ್ನ, ರಾತ್ರಿ ಅನ್ನಸಂತರ್ಪಣೆ ನಡೆಯಲಿದ್ದು ಅನ್ನಛತ್ರದಲ್ಲಿ ಕೊಪ್ಪರಿಗೆ ಮುಹೂರ್ತ ಏ.6ರಂದು ಬೆಳಗ್ಗೆ ನಡೆಯಿತು. ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಪ್ರಧಾನ ಅರ್ಚಕರಾದ ಸತ್ಯಪ್ರಿಯ ಕಲ್ಲೂರಾಯ ಅವರು ಪೂಜಾ ವಿಧಿವಿಧಾನದೊಂದಿಗೆ ಕೊಪ್ಪರಿಗೆ ಮುಹೂರ್ತ ನೆರವೇರಿಸಿದರು. ಹಿರಿಯರಾದ ಧನಂಜಯ ಗೌಡ ಮುದ್ಯ ಅವರು ಪಾಕಶಾಲೆಯ ಸಾಮೂನು ಉಗ್ರಾಣವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುಧಾ ಡಿ.ರಾವ್, ಪ್ರಧಾನ ಅರ್ಚಕರಾದ ಕೃಷ್ಣಪ್ರಸಾದ್ ಉಡುಪ ಎಂ., ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ವೇಣುಗೋಪಾಲ ನಾಯಕ್ ಕುಳ್ಳಾಜೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ನೇಮಿಚಂದ್ರ ಗೌಡ ಮುದ್ಯ, ಸಂಚಾಲಕರಾದ ಗೋಪಾಲ ವಳಾಲುದಡ್ಡು, ಪ್ರಧಾನ ಕಾರ್ಯದರ್ಶಿ ನಾರಾಯಣ ಪೂಜಾರಿ ನೀರಕಟ್ಟೆ, ಕೋಶಾಧಿಕಾರಿ ಸೋಮಸುಂದರ ಕೊಡಿಪಾನ, ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ವಸಂತಿಜಯಂತ ಬಿ.ಅತಿಕರಮಜಲು, ಕೋಶಾಧಿಕಾರಿ ಶ್ರೀಧರ ಪೂಜಾರಿ ಬರಮೇಲು ಕಾಂಚನ ಸಹಿತ ಬ್ರಹ್ಮಕಲಶೋತ್ಸವ, ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಜಗದೀಶ್ ಬಾರಿಕೆ ವಂದಿಸಿದರು.
ಇಂದು ಹಸಿರುವಾಣಿ ಸಮರ್ಪಣೆ
ಏ.7ರಂದು ಬೆಳಗ್ಗೆ ಬ್ರಹ್ಮಕಲಶೋತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಗಲಿದೆ. ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ನಡ್ಪ ದೇವಸ್ಥಾನ, ಕಾಂಚನ ಜಂಕ್ಷನ್, ಶಾಂತಿನಗರ ಭಜನಾ ಮಂದಿರ, ಬೆದ್ರೋಡಿ ಭಜನಾ ಮಂದಿರ, ಪೆರಿಯಡ್ಕ ಭಜನಾ ಮಂದಿರ, ವಳಾಲು ಹಾಲಿನ ಡೈರಿ, ಪಡ್ಪು ದೈವಸ್ಥಾನ, ಮುಗೇರಡ್ಕ ದೈವಸ್ಥಾನಗಳಿಂದ ಹೊರೆಕಾಣಿಕೆ ಆಗಮಿಸಲಿದೆ. ಬೆಳಗ್ಗೆ, ಸಂಜೆ ಭಜನೆ ನಡೆಯಲಿದೆ. ಸಂಜೆ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ, ವೈದಿಕ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ೭ರಿಂದ ಜಗದೀಶ ಬಾರಿಕೆ ಬಳಗ, ವಿದುಷಿ ಪ್ರತಿಭಾ ಪ್ರವೀಣ್ಕುಮಾರ್ ಗಾಣದಮೂಲೆ ಬಳಗದವರಿಂದ ಭಕ್ತಿಸಂಗೀತ, ಸುಗಮ ಸಂಗೀತ ನಡೆಯಲಿದೆ.










