ಸದರ್ನ್ ಇಂಡಿಯಾ ಬೀಡಿ ಗುತ್ತಿಗೆದಾರರ ಸಭೆ, ಜನರಲ್ ಮ್ಯಾನೇಜರ್‌ಗೆ ಸನ್ಮಾನ

0

ಪುತ್ತೂರು: ಸದರ್ನ್ ಇಂಡಿಯಾ ಬೀಡಿ ಗುತ್ತಿಗೆದಾರರ ಸಭೆಯು ಎ.7 ರಂದು ಪುತ್ತೂರು ಮನೀಷಾ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಬೀಡಿ ಗುತ್ತಿಗೆದಾರರ ವಿವಿಧ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಸದರ್ನ್ ಇಂಡಿಯಾ ಬೀಡಿ ವರ್ಕ್ಸ್ ಗುತ್ತಿಗೆದಾರರ ಯೂನಿಯನ್ ಸಂಘದ ಗೌರವ ಅಧ್ಯಕ್ಷ ಸಂಜೀವ ಪೂಜಾರಿ ಕೂರೇಲು, ಅಧ್ಯಕ್ಷ ಕೆ.ಟಿ ಆನಂದ ಪೂಜಾರಿ, ಕಾರ್ಯದರ್ಶಿ ಖಲೀಲ್ ವಗ್ಗ, ಕೋಶಾಧಿಕಾರಿ ವೇಗಸ್ ಡಿ’ಸೋಜಾ ಕಾರ್ಕಳ, ಸಂಚಾಲಕ ಇಬ್ರಾಹಿಂ ಉಳ್ಳಾಲರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಪುತ್ತೂರು, ಉಪ್ಪಿನಂಗಡಿ, ಮೂಡಬಿದ್ರೆ, ಉಳ್ಳಾಲ, ಪಾಣೆಮಂಗಳೂರು, ಬೆಳ್ಮಣ್ಣು,ಕಾರ್ಕಳ ಈ 7 ಬ್ರ್ಯಾಂಚ್‌ಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ೭ ಡಿಫೋಗಳ ಜನರಲ್ ಮ್ಯಾನೇಜರ್ ಆಗಿರುವ ನರೇಂದ್ರ ಕುಮಾರ್ ಪಟೇಲ್‌ರವರನ್ನು ಪುತ್ತೂರು ಕಂಪೆನಿಯಲ್ಲಿ ಶಾಲು, ಪೇಟಾ, ಹಾರ, ಫಲಪುಷ್ಪ, ಸ್ಮರಣಿಕೆಯೊಂದಿಗೆ ಸನ್ಮಾನಿಸಿ, ಗೌರವಿಸಲಾಯಿತು.

LEAVE A REPLY

Please enter your comment!
Please enter your name here