






ಮಕ್ಕಳ ಕಲಿಕೆ ಅವಕಾಶಗಳ ಸುತ್ತ ಹಣೆದುಕೊಂಡಿದೆ – ನಿವೃತ್ತ ಶಿಕ್ಷಕ ರಾಮ್ ಭಟ್
ಮಕ್ಕಳು ಅವಕಾಶಗಳನ್ನು ಸದುಪಯೋಗ ಪಡೆದುಕೊಳ್ಳಬೇಕು – ಶ್ರೀ ಕೃಷ್ಣ ಕುಮಾರ್ ರೈ ಪಿ.ಡಿ.
ಅವಕಾಶಗಳು ಮಕ್ಕಳನ್ನು ಪ್ರತಿಭಾ ಸಂಪನ್ಮೂಲರನ್ನಾಗಿ ಮಾಡುತ್ತದೆ – ಗಿರಿಶಂಕರ ಸುಲಾಯ
ಶಿಕ್ಷಣ ಬರಿ ಪುಸ್ತಕದ ಓದು ಬರೆಹ ಲೆಕ್ಕವಲ್ಲ – ಗೀತಾ
ಮಕ್ಕಳ ಕಲಿಕೆಗೆ ಪೂರಕ ವ್ಯವಸ್ಥೆಯನ್ನು ರೂಢಿಸಿಕೊಡಬೇಕು – ಜಯಂತ್ ವೈ
ಮಕ್ಕಳು ಹವ್ಯಾಸಗಳನ್ನು ಬೆಳೆಸಿಕೊಂಡು ಪ್ರತಿಭಾವಂತರಾಗಿ ಬೆಳೆಯಬೇಕು- ಉದಯ ಸಾರಂಗ್
ಮಕ್ಕಳು ಪ್ರತಿಭಾ ಸಂಪನ್ನರಾಗಿ ಬೆಳೆಯಬೇಕು- ವಿಜಯ ಕುಚ್ಚೆಜಾಲು


ಸವಣೂರು : ಮಕ್ಕಳ ಕಲಿಕೆ ಅವಕಾಶಗಳ ಸುತ್ತ ಹಣೆದುಕೊಂಡಿದೆ ಎಂದು ನಿವೃತ್ತ ಶಿಕ್ಷಕ ರಾಮ್ ಭಟ್ ಹೇಳಿದರು.ಅವರು ಪುಣ್ಚಪಾಡಿ ಶಾಲೆಯಲ್ಲಿ ನಡೆದ 7 ನೇ ವರ್ಷದ ಮಕ್ಕಳ ಶಿಬಿರ ಬಣ್ಣಾಯಣವನ್ನು ಉದ್ಘಾಟಿಸಿ ಮಾತನಾಡಿದರು.



ಕೇವಲ ಪುಸ್ತಕದ ಓದು ಮಾತ್ರವಲ್ಲದೇ ಸಹಪಠ್ಯ ಚಟುವಟಿಕೆಗಳ ತೊಡಗಿಸಿಕೊಳ್ಳುವಿಕೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಎಂದರು. ಸರಕಾರಿ ಶಾಲೆಗಳ ಮಕ್ಕಳಿಗೆ ಇಂತಹ ಅತ್ಯುತ್ತಮವಾದ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.
ಮಣ್ಣಿನಲ್ಲಿ ಬಣ್ಣಾಯಣದ ಅಕ್ಷರಗಳಿಗೆ ಬಣ್ಣ ಹಚ್ಚುವ ಮೂಲಕ ಬಣ್ಣದ ಆಯನವನ್ನು ಆರಂಭಿಸಿದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪಿ.ಡಿ. ಕೃಷ್ಣಕುಮಾರ್ ರೈ ಇವರು ಮಾತನಾಡಿ ನಮ್ಮ ಶಾಲೆಯು ಮಕ್ಕಳಿಗೆ ವಿವಿಧ ಬಗೆಯ ಚಟುವಟಿಕೆಗಳನ್ನು ಆಯೋಜಿಸಿ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿದೆ ಎಲ್ಲ ಮಕ್ಕಳು ಆಕಾಶಗಳನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದರು.

ಸಮಾಜ ಸೇವಕ, ಪ್ರಗತಿಪರ ಕೃಷಿಕ ಗಿರಿಶಂಕರ ಸುಲಾಯ ಮಾತನಾಡಿ. ಮಕ್ಕಳಿಗೆ ನಾವು ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡಬೇಕು. ಅವಕಾಶಗಳು ಮಕ್ಕಳನ್ನು ಪ್ರತಿಭಾ ಸಂಪನ್ನರಾಗಿ ಮಾಡುತ್ತದೆ ಎಂದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗೀತಾ ಮಾತನಾಡಿ. ಶಿಕ್ಷಣ ಎನ್ನುವುದು ಬರಿಯ ಪುಸ್ತಕದ ಓದು ಬರಹ ಲೆಕ್ಕವಲ್ಲ. ವ್ಯಕ್ತಿಯ ಸರ್ವಾಂಗೀಣ ಪ್ರಗತಿಗೆ ಇಂತಹ ಕಲಿಕಾ ಶಿಬಿರಗಳು ಬಹುಮುಖ್ಯ. ಪುಣ್ಚಪ್ಪಾಡಿ ಶಾಲೆ ಇಂತಹ ಅನೇಕ ಅವಕಾಶಗಳನ್ನು ಮಕ್ಕಳಿಗೆ ನೀಡುತ್ತಿರುವುದು ಒಳ್ಳೆಯ ಸಂಗತಿ ಎಂದರು.
ಸಮೂಹ ಸಂಪನ್ಮೂಲ ವ್ಯಕ್ತಿ ಜಯಂತ್ ವೈ ಮಾತನಾಡಿ ನಾವು ನಮ್ಮ ಮಕ್ಕಳ ಕಲಿಕೆಗೆ ಪೂರಕ ವ್ಯವಸ್ಥೆಯನ್ನು ರೂಢಿಸಿಕೊಡಬೇಕು. ಇದೆ ನಿಜವಾದ ಶಿಕ್ಷಣ ವ್ಯವಸ್ಥೆ. ಪುಣ್ಚಪ್ಪಾಡಿ ಶಾಲೆ ಇಂತಹ ಒಳ್ಳೆಯ ವ್ಯವಸ್ಥೆಯನ್ನು ಮಕ್ಕಳಿಗೆ ನೀಡುತ್ತಿದೆ ಎಂದರು.
ರಂಗದಾಟದ ಸಂಪನ್ಮೂಲ ವ್ಯಕ್ತಿ ಉದಯ ಸಾರಂಗ್ ಮಾತನಾಡಿ ಇಂದಿನ ಮಕ್ಕಳು ತಮ್ಮ ಅಮೂಲ್ಯ ಬಾಲ್ಯವನ್ನು ಮೊಬೈಲ್, ಟಿವಿಯಲ್ಲಿ ಕಳೆದುಕೊಳ್ಳುತ್ತಿದ್ದಾರೆ. ಅದರ ಬದಲು ಪುಸ್ತಕ ಓದುವುದು, ಚಿತ್ರ ಕಲೆ, ಹಾಡು ನೃತ್ಯ ಹೀಗೆ ಹವ್ಯಾಸಗಳನ್ನು ಬೆಳೆಸಿಕೊಂಡು ಪ್ರತಿಭಾವಂತರಾಗಿ ಬೆಳೆಯಬೇಕು ಎಂದರು.
ಎಸ್ ಡಿ ಎಂ ಸಿ ಅಧ್ಯಕ್ಷ ವಿಜಯ ಕುಚ್ಚೆಜಾಲು ಮಾತನಾಡಿ.. ನಮ್ಮ ಶಾಲೆಯಲ್ಲಿ ಈಗ ಅನೇಕ ಅವಕಾಶಗಳನ್ನು ನಮ್ಮ ಮಕ್ಕಳಿಗೆ ನೀಡುತ್ತಿದ್ದೇವೆ. ಮಕ್ಕಳು ಪ್ರತಿಭಾ ಸಂಪನ್ನರಾಗಿ ಬೆಳೆಯಬೇಕೆಂಬುದೇ ನಮ್ಮ ಆಶಯ ಎಂದರು.
ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರು, ಪೋಷಕರು ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯಗುರು ರಶ್ಮಿತಾ ಜೈನ್ ನರಿಮೊಗರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಶೋಭಾ ಕೆ ವಂದಿಸಿದರು. ಶಿಕ್ಷಕರಾದ ಭಾಗೀರಥಿ, ಲೀಲಾವತಿ, ಭವಾನಿ ಕೆ. ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಶಿಬಿರದ ವಿಶೇಷತೆಗಳು
ನಿರಂತರ 7 ನೇ ವರ್ಷದ ಸರ್ಕಾರಿ ಶಾಲಾ ವಿಶಿಷ್ಟ ಮಕ್ಕಳ ಶಿಬಿರ ಬಣ್ಣಾಯಣ
ಮಣ್ಣಿಗೆ ಬಣ್ಣ ಬೆರಸಿ ಬಣ್ಣಾಯಣ ಆರಂಭ
ಮಕ್ಕಳ ಊಟ ತಿಂಡಿಗೆ ಸ್ಥಳೀಯ ಆಹಾರದ ಬಳಕೆ
ಶಿಬಿರದಲ್ಲಿ ಮಣ್ಣು,ಬಣ್ಣ ,ಕಾಗದ, ಹಾಡಿನ ಬಗ್ಗೆ ಕಲಿಕೆ
ಶಾಲೆಯಂಗಳದಲ್ಲಿ ಮಕ್ಕಳು ಪೋಷಕರಿಂದ ನಿರ್ಮಿತ ವಿಶೇಷ ಅಲಂಕಾರ










