







ಆಲಂಕಾರು: ಎಸ್. ಎಂ.ವೈ.ಎಂ. ಮತ್ತು ಸೈಂಟ್ ಮೇರಿಸ್ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್ ನೆಟ್ಟಣ,ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ) ಕಡಬ ತಾಲ್ಲೂಕು ಇದರ ಆಶ್ರಯದಲ್ಲಿ ಸಂಘದ ಸಮಾಜ ಸೇವಾ ಕಾರ್ಯಕ್ರಮದ ಉದ್ಘಾಟನೆ ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಸೀಮಿತ ಮ್ಯಾಟ್ ಕಬಡ್ಡಿ ಪಂದ್ಯಾಟ ಎಸ್.ಎಂ.ವೈ.ಎಂ.ಟ್ರೋಫಿ ಎ.12 ರಂದು ಸಂಜೆ 5:30 ಕ್ಕೆ ಸೈಂಟ್ ಮೇರಿಸ್ ಚರ್ಚ್ ನೆಟ್ಟಣದಲ್ಲಿ ನಡೆಯಲಿದೆ.


ಸಭಾಧ್ಯಕ್ಷತೆಯನ್ನು ನೆಟ್ಟಣ ಸೈಂಟ್ ಮೇರಿಸ್ ಚರ್ಚ್ ಧರ್ಮಗುರು ರೇ.ಫಾ ಆದರ್ಶ್ ಜೋಸೆಫ್ ವಹಿಸಲಿದ್ದು, ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಉದ್ಘಾಟನೆ ಮಾಡಲಿದ್ದು,ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ ಸೋಜ ಸೇರಿದಂತೆ ಹಲವು ಮಂದಿ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದ್ದು ರಾತ್ರಿ ಸಮಾರೋಪ ಸಮಾರಂಭ ನಡೆಯಲಿದೆ.



ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನೆಟ್ಟಣ ಸೈಂಟ್ ಮೇರಿಸ್ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಕ್ಲಬ್ ಅಧ್ಯಕ್ಷ ಆಸ್ಟಿನ್ ತೊಮಸ್ ವಹಿಸಲಿದ್ದು ಬಹುಮಾನ ವಿತರಣೆಯನ್ನು ರೇ ಫಾ ಪೀಟರ್ ಪದರಾಂಚಿರ ಮಾಡಲಿದ್ದು ಇತರ ಗಣ್ಯರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ತಂಡಗಳಿಗೆ ನೊಂದಣಿ ಮಾಡಲು ಎ.9 ಕೊನೆಯ ದಿನಾಂಕವಾಗಿದ್ದು ಹೆಚ್ಚಿನ ಮಾಹಿತಿಗಾಗಿ 6364404144,9902762825,9606351706,9108897195 ನಂಬರ್ ಗೆ ಸಂಪರ್ಕಿಸುವಂತೆ ಈ ಕಾರ್ಯಕ್ರಮಕ್ಕೆ ಎಲ್ಲಾರು ಭಾಗವಹಿಸುವಂತೆ ಧರ್ಮಗುರುಗಳು ಹಾಗೂ ಸಂಚಾಲಕರಾದ ರೇ ಫಾ! ಆದಶ್೯ ಜೋಸೆಫ್, ಗೌರವಾಧ್ಯಕ್ಷರಾದ ಅಬ್ರಹಾಂ ಎಂ,ಗೌರವ ಸಲಹೆಗಾರರಾದ ವಿಜೇಶ್ ಕೆ.ಜೆ.ಅಧ್ಯಕ್ಷರಾದ ಆಸ್ಟಿನ್ ತೊಮಸ್, ಎಸ್.ಎಂ.ವೈ.ಎಂ. ಸಬಾಸ್ಟಿನ್ ಪಿ,ಚರ್ಚಿನ ಟ್ರಸ್ಟಿ ಬೇಬಿ ಚೆಂಚಿತ್ತಾನಂ,ಜಿಬಿನ್ ಆಂಡ್ರೋಸ್,ಕಾರ್ಯದರ್ಶಿ ಆಕಾಶ್ ತೊಮಸ್, ಖಜಾಂಚಿ ಜಸ್ಟಿನ್ ಸಬಾಸ್ಟಿನ್,ಉಪಾಧ್ಯಕ್ಷರಾದ ರೋಬನ್,ಸಂಘಟನಾ ಕಾರ್ಯದರ್ಶಿ ಅಭಿನ್ ಅಲೆಕ್ಸ್ ,ಜತೆ ಕಾರ್ಯದರ್ಶಿ ಜೋಯಲ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










