






ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವು ಮಧ್ಯಾಹ್ನ 3ಕ್ಕೆ ಪ್ರಕಟವಾಗಿದೆ. ಇದೇ ಮೊದಲ ಬಾರಿ ಫಲಿತಾಂಶದ ಜತೆಗೇ ಅಂಕಪಟ್ಟಿಯೂ ಲಭ್ಯವಿದ್ದು, ಡಿಜಿಲಾಕರ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.


https://karresults.nic.in ಮತ್ತು ಕರ್ನಾಟಕ ಒನ್ ಆ್ಯಪ್ ಮೂಲಕ ಫಲಿತಾಂಶ ಪಡೆಯಬಹುದಾಗಿದೆ. ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮತ್ತು ಎಸ್ಎಂಎಸ್ ಮೂಲಕವೂ ಫಲಿತಾಂಶದ ಮಾಹಿತಿಯನ್ನು ಮಂಡಳಿಯಿಂದ ರವಾನಿಸಲಾಗಿದೆ. ಫೆ.28ರಿಂದ ಮಾ.17ರವರೆಗೆ ವಿವಿಧ ವಿಷಯಗಳ ಪರೀಕ್ಷೆಗಳು ನಡೆದಿದ್ದವು.













