






ಮಕ್ಕಳಿಗೆ ಉತ್ಸಾಹ ತುಂಬಲು ಇಂತಹ ತರಬೇತಿ ಸಹಕಾರಿ – ರಾಕೇಶ್ ಆಚಾರ್ಯ ಬನಾರಿ



ಪುತ್ತೂರು: ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಸಜಂಕಾಡಿಯಲ್ಲಿ ಒಂದು ದಿನದ ರಂಗಕಲಾ ತರಬೇತಿ ಕಾರ್ಯಾಗಾರವು ಅದ್ಧೂರಿಯಾಗಿ ನಡೆಯಿತು. ಸಂಪನ್ಮೂಲ ವ್ಯಕ್ತಿ ರಾಕೇಶ್ ಆಚಾರ್ಯ ಬನಾರಿ ರಂಗ ನಿರ್ದೇಶಕರು, ರಂಗಾಯಣ ಪದವೀಧರರು ಮೈಸೂರು ಕಾರ್ಯಾಗಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು , ಮಕ್ಕಳ ಸೃಜನಶೀಲತೆಯನ್ನು ಉತ್ತಮ ಪಡಿಸಿ , ಉತ್ಸಾಹ ತುಂಬಲು ಸಹಕಾರಿ ಇಂತಹ ತರಬೇತಿ ಅತ್ಯಂತ ಪ್ರಯೋಜನಕಾರಿ ಎಂದೇಳಿ, ಶುಭ ಹಾರೈಸಿದರು.



ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಸ.ಹಿ ಪ್ರಾ ಶಾಲೆ ಪಳ್ಳತ್ತಾರು ಇಲ್ಲಿನ ಶಿಕ್ಷಕಿ ಶ್ರೀಮತಿ ಪೂರ್ಣಿಮ ಸಂದರ್ಭೋಚಿತ ವಾಗಿ ಮಾತನಾಡಿ ಶುಭಹಾರೈಸಿದರು.
ಪದವೀಧರ ಶಿಕ್ಷಕ ಗಣೇಶ ನಾಯಕ್ ಪುತ್ತೂರು ಪ್ರಾಸ್ತಾವಿಕ ಮಾತುಗಳನ್ನಾಗಿ ಒಟ್ಟು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು .ಸಭಾ ಕಾರ್ಯಕ್ರಮದ ಬಳಿಕ ಸಂಪನ್ಮೂಲ ವ್ಯಕ್ತಿಗಳು ಹಾಡು ,ಕುಣಿತ ,ಅಭಿನಯ ಮತ್ತು ಕ್ರಾಪ್ಟ್ ತರಬೇತಿ ನೀಡಿ ವಿದ್ಯಾರ್ಥಿಗಳನ್ನು ರಂಜಿಸಿದರು .ಗೌರವ ಶಿಕ್ಷಕಿ ಗಾಯತ್ರಿ ಸ್ವಾಗತಿಸಿದರು.ಅತಿಥಿ ಶಿಕ್ಷಕಿ ಆಯಿಷತ್ ಮಿಸ್ರಿಯಾ ಕಾರ್ಯಕ್ರಮ ನಿರೂಪಿಸಿದರು.










