ಸಂಟ್ಯಾರು ಸರಸ್ವತಿಪುರಂ ನ ಸರಸ್ವತಿ ಸದನದಲ್ಲಿ‌ “ಅಭಿವ್ಯಕ್ತ -2026″ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ

0

ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಅಭಿವ್ಯಕ್ತಿಸಲು ಇಂತಹ ಶಿಬಿರಗಳು ವೇದಿಕೆಯಾಗಿದೆ. ಶಿಬಿರ ಆಯೋಜಕರ ಪ್ರಯತ್ನ ಶ್ಲಾಘನೀಯ -ಶ್ರೀ ಸುಂದರ್ ರೈ ಮಂದಾರ

ಸಂಟ್ಯಾರು: ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ ಪುತ್ತೂರು(ರಿ)ಮತ್ತು ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ (ರಿ)ದರ್ಬೆ ,ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ಸಂಟ್ಯಾರಿನ ಸರಸ್ವತಿ ಪುರಂ ನ ಸರಸ್ವತಿ ಸದನದಲ್ಲಿ “ಮಕ್ಕಳ ಬೇಸಿಗೆ ಶಿಬಿರ ಅಭಿವ್ಯಕ್ತ-2026ನ್ನು ರಂಗಭೂಮಿ ಕಲಾವಿದ ಸುಂದರ ರೈ ಮಂದಾರ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು‌ ಅಭಿವ್ಯಕ್ತಿಸಲು ಇಂತಹ ಶಿಬಿರಗಳು ಸಹಕಾರಿ ಗ್ರಾಮೀಣ ಭಾಗದಲ್ಲಿ ಇಂತಹ ಬೇಸಿಗೆ ಶಿಬಿರ ಆಯೋಜಿಸಿದ ಸಂಘಟಕರ ಪ್ರಯತ್ನ ಶ್ಲಾಘನೀಯ ಎಂದರು .ಮುಖ್ಯ ಅಭ್ಯಾಗತರಾಗಿದ್ದ ವೈದ್ಯರಾದ ಡಾ.ಎ.ಪಿ‌ ಸತೀಶ್ ಮರಿಕೆಯವರು ಮಾತನಾಡಿ ಸತತ ಪ್ರಯತ್ನಗಳಿಂದ ಮಕ್ಕಳು ಸಾಧಕರಾಗಿ ಈ ಸಮಾಜದ ಸಂಪತ್ತಾಗಲಿ ಎಂದು ಶುಭ ಹಾರೈಸಿದರು. ಇನ್ನೋರ್ವ ಅತಿಥಿಗಳಾಗಿದ್ದ ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ)ದರ್ಬೆ ಪುತ್ತೂರು ಇದರ ಅಧ್ಯಕ್ಷ ರಮೇಶ್ ಪ್ರಭು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.

ವೇದಿಕೆಯಲ್ಲಿ ಶ್ರೀ ಸರಸ್ವತಿ ಪೂರ್ವ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ನಾಯಕ್ ಸಂಟ್ಯಾರು ಉಪಸ್ಥಿತರಿದ್ದರು .ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ರಾಜಗೋಪಾಲ ಬಾಳೆಗುಳಿ ಅಧ್ಯಕ್ಷತೆ ವಹಿಸಿ,ಶಿಬಿರಕ್ಕೆ ಶುಭ ಹಾರೈಸಿದರು. ಶಿಬಿರ ಸಂಯೋಜಕ, ಶಿಕ್ಷಕ ಗಣೇಶ ನಾಯಕ್ ಪುತ್ತೂರು ಪ್ರಸ್ತಾವಿಸಿ, ಸ್ವಾಗತಿಸಿದರು. ಭವ್ಯ ಮರಿಕೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪ್ರಶಾಂತಿ ವಂದಿಸಿದರು.

ಗೌರವಾರ್ಪಣೆ : 5 ದಿನಗಳ ಕಾಲ ನಡೆಯುವ ಬೇಸಿಗೆ ಶಿಬಿರವನ್ನು ಉದ್ಘಾಟಿಸಿದ ತುಳು ರಂಗಭೂಮಿಯ ಬಹುಮುಖ ಪ್ರತಿಭೆ ಸುಂದರ್ ರೈ ಮಂದಾರ ಅವರನ್ನು ಸಂಘಟಕರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತುಳುವಿನಲ್ಲೇ ಮಾತನಾಡಿ ಭಾಷೆಯ ಮೇಲಿನ ಪ್ರೇಮ, ಅಭಿಮಾನ ತೋರಿದ ರಂಗಭೂಮಿ ಕಲಾವಿದ ಮಂದಾರ.

LEAVE A REPLY

Please enter your comment!
Please enter your name here