






ಸವಣೂರು: ಪಾಲ್ತಾಡಿ ಗ್ರಾಮದ ಚೆನ್ನಾವರ ಪಟ್ಟೆ ಶ್ರೀ ಶಿರಾಡಿ ದೈವಸ್ಥಾನದ ಪುನರ್ ನಿರ್ಮಾಣ ಪ್ರತಿಷ್ಠಾ ಮಹೋತ್ಸವ ಹಾಗೂ ನೇಮೋತ್ಸವದ ಆಮಂತ್ರಣ ಬಿಡುಗಡೆ ಚೆನ್ನಾವರ ಶ್ರೀ ಉಳ್ಳಾಕುಲು ದೈವಸ್ಥಾನದ ಆವರಣದಲ್ಲಿ ನಡೆಯಿತು.



ಈ ಸಂದರ್ಭದಲ್ಲಿ ಶ್ರೀ ಶಿರಾಡಿ ದೈವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುನೀತ್ ರೈ ಸಿ.ಪಿ.ಚೆನ್ನಾವರ ಪಟ್ಟೆ, ಕಾರ್ಯಾಧ್ಯಕ್ಷ ದೀಕ್ಷಿತ್ ಜೈನ್ ಚೆನ್ನಾವರಗಡಿಗುತ್ತು,ಗೌರವ ಸಲಹೆಗಾರರಾದ ಸುಬ್ರಾಯ ಗೌಡ ಪಾಲ್ತಾಡಿ, ಮೋನಪ್ಪ ಗೌಡ ಪಟ್ಲ,ಪುಟ್ಟಣ್ಣ ನಾಯ್ಕ ಸಿ.ಎಂ.,ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ,ಜತೆ ಕಾರ್ಯದರ್ಶಿ ಪ್ರಶಾಂತ್ ರೈ ಚೆನ್ನಾವರ ಪಟ್ಟೆ,ಕೋಶಾಧಿಕಾರಿ ಸುಬ್ಬಣ್ಣ ದಾಸ್, ಸಮಿತಿ ಸದಸ್ಯರಾದ ಮಹಾಬಲ ರೈ ಚೆನ್ನಾವರ ಪಟ್ಟೆ,ದೇವಪ್ಪ ನಾಯ್ಕ ಸಿ.,ಜಗದೀಶ್ ನಾಯ್ಕ,ಪ್ರಮೋದ್ ರೈ ಚೆನ್ನಾವರ ಪಟ್ಟೆ, ನಿತೇಶ್ ಮಡಿವಾಳ ,ಚಿರಾಗ್ ,ಹರ್ಷಿತ್ ,ಸರಿತಾ ಉಪಸ್ಥಿತರಿದ್ದರು.












