ಬೆಳೆಯುತ್ತಿರುವ ಪುತ್ತೂರಿಗೊಂದು ಹೊಸ ಶಾಪಿಂಗ್ ಮಾಲ್ – ಭೂಮಿ ಪೂಜೆ ಕಾರ್ಯಕ್ರಮ

0

ಪುತ್ತೂರು :ಬೆಳೆಯುವ ಪುತ್ತೂರು ಮಹಾನಗರದಲ್ಲಿ ಹೊಸ ಮತ್ತು ದೊಡ್ಡದಾದ ಐಷಾರಾಮಿ ಶಾಪಿಂಗ್ ಮಾಲ್ ನ ಭೂಮಿ ಪೂಜೆ ಕಾರ್ಯಕ್ರಮ ನಡೆಯಿತು.

ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ದಿವ್ಯಹಸ್ತದಿಂದ, ಆಶೀರ್ವಚನದ ಮೂಲಕ “ಭೂಮಿ ಪೂಜೆ” ನಡೆಯಿತು.ಬಳಿಕ ಮಾತನಾಡಿದ ಅವರು “ಈ ಕಟ್ಟಡ ಜನರ ಏಳಿಗೆಯಲ್ಲಿ ಬೆಳೆದು ನಿಲ್ಲಲಿದೆ. ಇದಕ್ಕೆ ದೇವರ ಆಶೀರ್ವಾದ ಸದಾ ಇರಲಿದೆ ಎಂದು ಆಶೀರ್ವದಿಸಿದರು.

ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ‘ ನಗರದ ಮುಖ್ಯ ರಸ್ತೆಯಲ್ಲಿ ಮತ್ತು ನಮ್ಮ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಈ ಬೃಹತ್ ಕಟ್ಟಡ ಬರುತ್ತಿರುವುದು ಸಂತೋಷ’ ಎಂದರು . ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿ ರವೀಶ್ ತಂತ್ರಿ ಶುಭ ಹಾರೈಸಿದರು.

ದೈವಜ್ಞ ಕೃಷ್ಣಕುಮಾರ್ ಉಪಾಧ್ಯಾಯ ಪೂಜಾ ವಿಧಿ ವಿಧಾನಗಳನ್ನು ನಡೆಸಿದರು. ಹಾಗೆಯೇ ಕಟ್ಟಡದ ಪಾಲುದಾರರು ಹಾಗೂ ನಿರ್ಮಾಣದಲ್ಲಿ ಸಹಕರಿಸುವ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಶ್ರೀ ಮಾಲಿಂಗೇಶ್ವರ ಬಿಜಿನೆಸ್ ವೆಂಚರ್ಸ್ ನೇತೃತ್ವದಲ್ಲಿ ತಲೆ ಎತ್ತಲಿರುವ ಈ ಶಾಪಿಂಗ್ ಮಾಲ್ ಒಟ್ಟು ಏಳು ಅಂತಸ್ತುಗಳನ್ನು ಹೊಂದಿದೆ. ಸುಮಾರು 70,000 ಸ್ಕ್ವೇರ್ ಫೀಟ್ ವಿಸ್ತಾರ, ಪಾರ್ಕಿಂಗ್ ಜೊತೆಗೆ ರಿಟೇಲ್ ಅಂಗಡಿಗಳಿಗೆ, ಬ್ರಾಂಡ್ ಗಳಿಗೆ, ಹೋಟೆಲ್, ರೆಸ್ಟೋರೆಂಟ್, ಗೃಹಪ್ರಯೋಗಿ… ಹೀಗೆ ಎಲ್ಲಾ ವಿಧದ ವ್ಯವಹಾರ ಮಳಿಗೆಗಳಿಗೆ ಅವಕಾಶವಿರುತ್ತದೆ’

LEAVE A REPLY

Please enter your comment!
Please enter your name here