ಶ್ರೀ ಕ್ಷೇತ್ರ ಶರವೂರಿನಲ್ಲಿ ಜಾತ್ರೋತ್ಸವ ಸಂಪನ್ನ : ಭದ್ರಕಾಳಿ ಅಮ್ಮನವರ ಗುಡಿಯಲ್ಲಿ ವಿಶೇಷ ಪೂಜೆ ; ಶಿರಾಡಿ ಮತ್ತು ಗುಳಿಗ ದೈವಗಳ ನೇಮೋತ್ಸವ

0


ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎ.3 ರಿಂದ ಎ.13 ರ ತನಕ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯಿತು.


ಎ.12 ಕವಾಟೋಧ್ಘಾಟನೆ,ಪ್ರಸನ್ನ ಪೂಜೆ,ಶಯಾನ ಪ್ರಸಾದ ವಿತರಣೆ,ಯಾತ್ರಹೋಮ,ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅಪರಾಹ್ನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಆಲಂಕಾರು ಇವರ ಪ್ರಾಯೋಜಕತ್ವದಲ್ಲಿ ಭಕ್ತಿರಸಮಂಜರಿ ಕಾರ್ಯಕ್ರಮ ನಡೆದು ಸಂಜೆ ಅವಭೃತ ಮೆರವಣಿಗೆ, ಕಟ್ಟೆಪೂಜೆಗಳು,ಶಾಂತಿಮೊಗರು ಕುಮಾರಧಾರೆಯಲ್ಲಿ ಅವಭೃತ ನಡೆದು ಧ್ವಜಾವರೋಹಣ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.


ಎ.13 ರಂದು ಭದ್ರಕಾಳಿ ಅಮ್ಮನವರ ಗುಡಿಯಲ್ಲಿ ವಿಶೇಷ ಪೂಜೆ, ಶ್ರೀ ಶಿರಾಡಿ ಮತ್ತು ಗುಳಿಗ ದೈವಗಳ ನೇಮೋತ್ಸವ,ಶ್ರೀ ಅಯ್ಯಪ್ಪ ಭಕ್ತವೃಂದ ಶರವೂರು ,ಆಲಂಕಾರು, ರಾಮಕುಂಜದವರಿಂದ ಗಂಜಿ ಊಟ ಸೇವೆ ನಡೆಯಿತು. ಜಾತ್ರೋತ್ಸವ ಕ್ಕೆ ಅಗಮಿಸಿದ ಊರ ಪರವೂರ ಸಾವಿರಾರು ಭಕ್ತರು ವಿವಿಧ ಸೇವೆಯಲ್ಲಿ ಪಾಲ್ಗೊಂಡು ದೇವಿಯ ಗಂಧ ಪ್ರಸಾದ ಸ್ವೀಕರಿಸಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ದೇವಸ್ಥಾನದ ವಿವಿಧ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಸರ್ವ ಸದಸ್ಯರು,ಅರ್ಚಕರು,ಸಿಬ್ಬಂದಿ ವರ್ಗ,ಊರ ಪರವೂರ ಭಕ್ತರು ಜಾತ್ರೋತ್ಸವ ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here