






ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಎ.13 ರಂದು ಸಂಜೆ 6 ರಿಂದ ಬಾಲ ಕಲಾವಿದೆ ಸೋನಿಕಾ ಜನಾರ್ದನ್ ಮತ್ತು ತಂಡದವರಿಂದ ಸ್ವರ ಮಾಧುರ್ಯ ಗಾನ ಕಲಾ ಕುಂಚ ಎಂಬ ವಿಭಿನ್ನ ಕಾರ್ಯಕ್ರಮವು ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಮೂಡಿಬರಲಿದೆ.


ಗಾಯಕರುಗಳಾಗಿ ಬಾಲ ಕಲಾವಿದೆ ಸೋನಿಕಾ ಜನಾರ್ದನ್, ಜ್ಯೂ.ಜೇಸುದಾದ್ ಖ್ಯಾತಿಯ ವೆಂಕಟಕೃಷ್ಣ ಭಟ್, ಧೃತಿ ಎಸ್.ಎಂ ಭಾಗವಹಿಸಲಿದ್ದಾರೆ. ಚಿತ್ರ ಕಲಾವಿದೆ ನಿಲಿಷ್ಕಾ ಕೆರವರಿಂದ ಕಲಾ ಕುಂಚ ಪ್ರದರ್ಶನಗೊಳ್ಳಲಿದೆ. ಕಲಾಸ್ತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸ್ವರ ಮಾಧುರ್ಯ ಬಳಗದ ಜನಾರ್ದನ್ ಪುತ್ತೂರು ತಿಳಿಸಿದ್ದಾರೆ.













