






ಧಾರ್ಮಿಕ ಕೇಂದ್ರಗಳ ಉಳಿವಿಗೆ ಧರ್ಮ ಶಿಕ್ಷಣ ಅಗತ್ಯ -ಸುಬ್ರಮಣ್ಯ ನಟ್ಟೋಜ


ಬಡಗನ್ನೂರು: ಧಾರ್ಮಿಕ ಕೇಂದ್ರದ ಉಳಿವಿಗೆ ಧರ್ಮ ಶಿಕ್ಷಣ ಅಗತ್ಯ ಎಂದು ಸುಬ್ರಮಣ್ಯ ನಟ್ಟೋಜ ಹೇಳಿದರು ಅವರು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯುವ ಧರ್ಮ ಶಿಕ್ಷಣ ತರಗತಿ ಉದ್ಘಾಟಿಸಿ ಮಾತನಾಡಿದರು.




ವೖೆಭವಯುತವಾಗಿ ದೇವಸ್ಥಾನ ನಿರ್ಮಾಣ ಮಾಡಿ ಸಮಾಜಕ್ಕೆ ಕೊಟ್ಟಿದೆ ಇದನ್ನು ಶಾಶ್ವತವಾಗಿ ಉಳಿಸುವ ಜವಾಬ್ದಾರಿ ನಮ್ಮದಾಗಿದೆ.
ಆಗಾಗಿ ಮಕ್ಕಳಿಗೆ ನಿರಂತರ ಧಾರ್ಮಿಕ ಚಿಂತನೆ ನೀಡಿ ನಮ್ಮ ದೇವರು ಎಂದು ಭಾವನೆ ಮೂಡಿಸುವ ನಿಟ್ಟಿನಲ್ಲಿ ಧಾರ್ಮಿಕ ಶಿಕ್ಷಣ ಅಗತ್ಯವಾಗಿದೆ. 150 ವರ್ಷಗಳ ಹಿಂದಿನ ಬ್ರಿಟಿಷ್ ಆಡಳಿತದ ಪಾಶ್ಚಿಮಾತ್ಯ ಸಂಸ್ಕೃತಿ ನಮ್ಮದಾಗಿದೆ ಇದರಿಂದ ಪೂಜ್ಯ ಶ್ರೀಗಳ ಅದೇಶದಂತೆ ಭಾರತೀಯ ಸಂಸ್ಕೃತಿ ಪ್ರಕಾರವಾಗಬೇಕು. ಈ ನಿಟ್ಟಿನಲ್ಲಿ ಶೃಂಗೇರಿ ಶ್ರೀಗಳ ಅದೇಶ ಮೂಲಕ ವಾರದಲ್ಲಿ 2 ಗಂಟೆ ಕಾಲ ಮಕ್ಕಳಿಗೆ ಧರ್ಮ ಶಿಕ್ಷಣ ನೀಡುವ ಕೆಲಸ ಆಗಬೇಕು. ಶಂಕರಾಚಾರ್ಯರ ಮೂಲಕ ಹಿಂದೂ ಧರ್ಮ ರಕ್ಷಣೆಯಾಗಿದೆ. ಅದನ್ನು ಉಳಿಸಿ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರಿಗೂ ಇದೆ ಎಂದ ಅವರು ಎ.26ರಿಂದ ಮೇ 2ರವರೆಗೆ 7 ದಿವಸಗಳ ಕಾಲ ಧಾರ್ಮಿಕ ಶಿಕ್ಷಣ ತರಗತಿ ಅಂಬಿಕಾ ವಿದ್ಯಾ ಸಂಸ್ಥೆಯ ನಡೆಯಲಿದೆ. 6ರಂದು ಶೃಂಗೇರಿ ಶ್ರೀ ಗಳು ಪುತ್ತೂರಿಗೆ ಬರುವವರಿದ್ದಾರೆ. ಅಂದು 7 ದಿನಗಳ ತರಗತಿಯ ಪಾಠವನ್ನು ಗುರುಗಳಿಗೆ ಅರ್ಪಣೆ ಮಾಡುವ ಅಪರೂಪದ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳನ್ನು ಕರೆತರುವ ಕೆಲಸವನ್ನು ಸಮಿತಿಯರು ಮಾಡಬೇಕು ಪಡುಮಲೆಯಲ್ಲಿ ಧರ್ಮ ಶಿಕ್ಷಣ ಕಾರ್ಯಕ್ರಮ ವಿಷು ಸಂಕ್ರಮಣದ ಈ ಶುಭ ಸಂದರ್ಭದಲ್ಲಿ ಉದ್ಘಾಟನೆಗೊಂಡಿದ್ದು, ತುಂಬಾ ಸಂತಸ ತಂದಿದೆ ಇದು ಸೂರ್ಯ ಚಂದ್ರರು ಇರುವ ತನಕ ಶಾಶ್ವತವಾಗಿರಲಿ ಎಂದು ಶುಭಹಾರೖೆಸಿದರು.

ಧಾರ್ಮಿಕ ಉಪನ್ಯಾಸಕ ಗಣರಾಜ್ಯ ಭಟ್ ಕೆದಿಲ ಮಾತನಾಡಿ, ಸನಾತನ ಧರ್ಮ ಶಿಕ್ಷಣ ನೆನಪಿಸುವ ಕಾರ್ಯ ಇದಾಗಿದೆ. ಸನತನ ಧರ್ಮ ಪ್ರಜ್ಞೆಯಿಂದ ಧರ್ಮ ಉಳಿದೆ ಹಿರಿಯರು ಹಾಕಿ ಕೂಟ್ಟ ಸಂಸ್ಕೃತಿ, ತಾಯಿ ಕೊಟ್ಟ ಪಾಠದ ಮುಂದುವರಿದ ಭಾಗ ಧರ್ಮ ಶಿಕ್ಷಣ. ಯಾವುದೇ ಶುಭ ಕಾರ್ಯಕ್ರಮದಲ್ಲಿ ರಿಬ್ಬನ್ ಕತ್ತರಿಸುವ ಸಂಸ್ಕೃತಿಯನ್ನು ಸನತನ ಧರ್ಮ ಕಲಿಸಿಲ್ಲ, 50 ವರ್ಷ ಹಿಂದಿನ ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಿಸುವು ಇದು ನಮ್ಮ ವಿಕೃತಿಯಾಗಿದೆ ಎಂದ ಅವರು ಹಿರಿಯರು ಮಾಡಿದ ಸಂಸ್ಕೃತಿ ನೆನಪಿಸುವ ಜತೆಗೆ ಸನತನ ಹಿಂದೂ ಧರ್ಮ ರಕ್ಷಣೆ ಮಾಡುವ ಕೆಲಸ ಧರ್ಮ ಶಿಕ್ಷಣ ತರಗತಿಗಳು ಮಾಡುತ್ತದೆ ಎಂದು ಗಣರಾಜ್ಯ ಭಟ್ ಕೆದಿಲ ಹೇಳಿದರು.
ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು, ಶ್ರೀ ಕ್ಷೇತ್ರ ಪಡುಮಲೆ ಜೀರ್ಣೋದ್ದಾರ ಬ್ರಹ್ಮಕಲಶೋತ್ಸವ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು, ಸಂದರ್ಭೋಚಿತ ಮಾತನಾಡಿ ಶುಭ ಹಾರೖೆಸಿದರು. ಸಭೆಯು ಪಡುಮಲೆ ಧರ್ಮ ಶಿಕ್ಷಣ ಸಮಿತಿ ಅಧ್ಯಕ್ಷ ಸಂತೋಷ ಆಳ್ವ ಗಿರಿಮನೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ತಾಲೂಕು ಕೋಶಾಧಿಕಾರಿ ಸ್ವಾಮಿ ಮಾಧವ, ಸುಳ್ಳಪದವು ಶ್ರೀ ಬಾಲ ಸುಬ್ರಮಣ್ಯ ಅನುದಾನಿತ ಹಿ.ಪ್ರಾ.ಶಾಲಾ ನಿವೃತ್ತ ಶಿಕ್ಷಕ ರಾಮಣ್ಣ ಗೌಡ ಬಸವಹಿತ್ಲು, ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ ಸದಸ್ಯ ಜನಾರ್ದನ ಪೂಜಾರಿ ಪದಡ್ಕ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಧರ್ಮ ಶಿಕ್ಷಣ ಶಿಕ್ಷಕ ರಾಮಕೃಷ್ಣ ಭಟ್ ಚಂದುಕೂಡ್ಲು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ವಿವಿಧ ಸಂಘ ಸಂಸ್ಥೆ ಗಳ ಮುಖಂಡರು, ಧರ್ಮ ಶಿಕ್ಷಣ ಸಮಿತಿ ಸದಸ್ಯರು ಮಕ್ಕಳ ಪೋಷಕರು ಹಾಗೂ ಊರಿನವರು ಭಾಗವಹಿಸಿದ್ದರು. ಧರ್ಮ ಶಿಕ್ಷಣ ಸಮಿತಿ ಸಂಚಲಕ ಸುಬ್ಬಯ್ಯ ರೖೆ ಹಲಸಿನಡಿ ಸ್ವಾಗತಿಸಿದರು. ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶಂಕರಿ ಪಟ್ಟೆ ವಂದಿಸಿದರು. ವಿದ್ಯಾಶ್ರೀ ಸೇನೆರಮಜಲು ಕಾರ್ಯಕ್ರಮ ನಿರೂಪಿಸಿದರು.
ಭಗವದ್ಗೀತೆ ಪುಸ್ತಕ, ಪೆನ್ ಮತ್ತು ನೋಟ್ ಬುಕ್ ವಿತರಣೆ: ಧರ್ಮ ಶಿಕ್ಷಣ ತರಗತಿಗೆ ಭಾಗವಹಿಸಿದ ಸುಮಾರು 40 ವಿದ್ಯಾರ್ಥಿಗಳಿಗೆ ಸಮಿತಿ ವತಿಯಿಂದ ಭಗವದ್ಗೀತೆ ಪುಸ್ತಕ, ಪೆನ್ ಮತ್ತು ನೋಟ್ ಬುಕ್ ವಿತರಣೆ ಮಾಡಲಾಯಿತು.










