ಜನ್ಮ ಕ್ರಿಯೇಷನ್ಸ್ ಪುತ್ತೂರು ಅರ್ಪಿಸುವ ‘ಪುತ್ತೂರ‍್ದ ಲಿಂಗನಾಥ’ ತುಳು ವಿಡಿಯೋ ಭಕ್ತಿಗೀತೆ ಬಿಡುಗಡೆ

0

ಪುತ್ತೂರು: ಇಂಡಿಯಾ ಬುಕ್ ಆಫ್ ರೆಕಾಡ್ಸ್ ಪ್ರೊಡಕ್ಷನ್ ಹೌಸ್ ‘ ಜನ್ಮ ಕ್ರಿಯೇಷನ್ಸ್ ಪುತ್ತೂರು’ ಅರ್ಪಿಸುವ, ಡಾ.ಹರ್ಷ ಕುಮಾರ್ ರೈ ಮಾಡಾವು ನಿರ್ಮಾಣದಲ್ಲಿ ಮೂಡಿಬಂದಿರುವ ಚಾರ್ವಿ ಆಡಿಯೋಸ್‌ರವರ ಚೊಚ್ಚಲ ಕಾಣಿಕೆ ‘ ಪುತ್ತೂರ‍್ದ ಲಿಂಗನಾಥ’ ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರೋತ್ಸವದ ಪ್ರಯುಕ್ತ ಶ್ರೀ ದೇವರ ಭಕ್ತಿ ಪ್ರಧಾನ ತುಳು ವಿಡಿಯೋ ಭಕ್ತಿ ಗೀತೆ ಎ.16ರಂದು ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಬಿಡುಗಡೆಗೊಂಡಿತು. ಶ್ರೀ ಮಹಾಲಿಂಗೇಶ್ವರ ದೇವರಿಗೆ ತುಪ್ಪದ ದೀಪದ ಪ್ರಾರ್ಥನೆಯೊಂದಿಗೆ ದೇವಳದ ಅರ್ಚಕರಾದ ಜಯರಾಮ ಜೊಯಿಸರವರು ಪ್ರಾರ್ಥನೆ ನೆರವೇರಿಸುವ ಮೂಲಕ ವಿಡಿಯೋ ಸಾಂಗ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಜನ್ಮ ಕ್ರಿಯೇಷನ್ಸ್‌ನ ಡಾ.ಹರ್ಷ ಕುಮಾರ್ ರೈ ಮಾಡಾವು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಈಶ್ವರ ಬೆಡೆಕಾರ್, ಕರುನಾಡ ಗಾನ ಗಂಧರ್ವ ಮಿಥುನ್‌ರಾಜ್ ವಿದ್ಯಾಪುರ, ಪತ್ರಕರ್ತ ಸಿಶೇ ಕಜೆಮಾರ್, ಪುಣಚ ಪಂಚಾಯತ್ ಉದ್ಯೋಗಿ ಮಮತಾ ಕಜೆಮಾರ್, ಚಾರ್ವಿ ಕಜೆಮಾರ್ ಮತ್ತಿತರರು ಉಪಸ್ಥಿತರಿದ್ದರು. ಜನ್ಮ ಕ್ರಿಯೇಷನ್ಸ್‌ನ ಡಾ.ಹರ್ಷ ಕುಮಾರ್ ರೈ ಮಾಡಾವು ನಿರ್ಮಾಣದಲ್ಲಿ ಮೂಡಿಬಂದಿರುವ ಆಲ್ಬಂ ಸಾಂಗ್‌ಗೆ ಪತ್ರಕರ್ತ ಸಿಶೇ ಕಜೆಮಾರ್ ಸಾಹಿತ್ಯ ನಿರ್ದೇಶನ, ಕರುನಾಡ ಗಾನ ಗಂಧರ್ವ, ಚಲನಚಿತ್ರ ಹಿನ್ನೆಲೆ ಗಾಯಕ ಮಿಥುನ್‌ರಾಜ್ ವಿದ್ಯಾಪುರ ಧ್ವನಿ ನೀಡಿದ್ದಾರೆ. ಕಬಕ ಶ್ರೀರಾಜ್ ಮ್ಯೂಸಿಕ್ ವಲ್ಡ್‌ನಲ್ಲಿ ಹಾಡಿನ ರೆಕಾರ್ಡಿಂಗ್ ಮತ್ತು ಮಾಸ್ಟರಿಂಗ್ ನಡೆದಿದ್ದು ಬಂಟ್ವಾಳದ ಧೀರಜ್ ಪಿ.ಎಸ್.ಕೆರವರ ಎಸ್.ಕೆ ಸ್ಟುಡಿಯೋದಲ್ಲಿ ಎಡಿಟಿಂಗ್ ನಡೆದಿದೆ. ಮಮತಾ ಕಜೆಮಾರ್, ಎಪಿಪಿ ಜನಾರ್ದನ್ ಬಿ.ಪುತ್ತೂರುರವರ ಸಹಕಾರ, ಅಶ್ವಿನಿ ಕುಮಾರ್ ಪುತ್ತೂರು ಪೋಸ್ಟರ್ ಡಿಸೈನಿಂಗ್ ಈ ಹಾಡಿಗಿದೆ. ಪುತ್ತೂರು ಸುದ್ದಿ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋ ಆಲ್ಬಂ ಸಾಂಗ್ ವೀಕ್ಷಕರಿಗೆ ಲಭ್ಯವಾಗಲಿದೆ.

ಚಾರ್ವಿ ಆಡಿಯೋಸ್ ಕಜೆಮಾರುರವರ ಚೊಚ್ಚಲ ಕಾಣಿಕೆ ಪುತ್ತೂರ್‍ದ ಲಿಂಗನಾಥ
https://youtu.be/URV1TjiKMkI

ಜನ್ಮ ಕ್ರಿಯೇಷನ್ಸ್ ಸಂಸ್ಥೆ
ಡಾ. ಹರ್ಷ ಕುಮಾರ್ ರೈ ಮಾಡಾವುರವರ ಜನ್ಮ ಕ್ರಿಯೇಷನ್ಸ್ ಸಂಸ್ಥೆ ಹೊಸ ಪ್ರತಿಭೆಗಳನ್ನು ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಅವರಿಗೆ ವೇದಿಕೆ ಕೊಟ್ಟು ಬೆಳೆಸುವ ಕಾರ್ಯವನ್ನು ಮಾಡುತ್ತಿದೆ. ಕಳೆದ 10 ವರ್ಷಗಳಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ, ದೇಶಾಭಿಮಾನ ಜೊತೆಗೆ ದೇಶಭಕ್ತಿ ಸಾರುವ ಮತ್ತು ಭಕ್ತಿ ಗೀತೆಗಳ ಹಲವು ಕಿರುಚಿತ್ರಗಳು, ಆಲ್ಬಮ್ ಹಾಡು ಮತ್ತು ಧ್ವನಿ ಮುದ್ರಿಕೆ ಗಳನ್ನು ನಿರ್ಮಾಣ ಮಾಡಿ ದೇಶ ವಿದೇಶಗಳಲ್ಲಿ ಬಿಡುಗಡೆಗೊಳಿಸಿದ ಕೀರ್ತಿ ಜನ್ಮ ಕ್ರಿಯೇಷನ್ಸ್ ಸಂಸ್ಥೆಗಿದೆ. ಧಾರ್ಮಿಕ ಕ್ಷೇತ್ರದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿ ಜಾಗತಿಕ ಹಿಂದೂ ಫೌಂಡೇಶನ್ ನಿಂದ ಪ್ರಶಂಸೆ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ತ್ರಿವರ್ಣ, ಜೈ ಭಾರತಾಂಬೆ ಹಾಗೂ ಅಷ್ಟ ಕ್ಷೇತ್ರ ಗಾನ ವೈಭವ ಇತ್ಯಾದಿ ಹಲವು ಕಿರುಚಿತ್ರಗಳು, ಆಲ್ಬಂ ಸಾಂಗ್ ಈ ಸಂಸ್ಥೆಯ ಮೂಲಕ ನಿರ್ಮಾಣಗೊಂಡಿವೆ. ಇದೀಗ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಪ್ರಯುಕ್ತ ಶ್ರೀ ದೇವರ ಬಗ್ಗೆ ಸಾಹಿತ್ಯವಿರುವ ‘ಪುತ್ತೂರ‍್ದ ಲಿಂಗನಾಥ ’ ಎನ್ನುವ ವಿಡಿಯೋ ಆಲ್ಬಂ ಗೀತೆ ಕೂಡ ಜನ್ಮ ಕ್ರಿಯೇಷನ್ಸ್ ಮೂಲಕ ಬಿಡುಗಡೆಗೊಂಡಿದೆ.

ಚಾರ್ವಿ ಆಡಿಯೋಸ್‌ರವರ ಚೊಚ್ಚಲ ಕಾಣಿಕೆ
ಡಾ.ಹರ್ಷ ಕುಮಾರ್ ರೈ ಮಾಡಾವು ನಿರ್ಮಾಣದಲ್ಲಿ ಮೂಡಿಬಂದಿರುವ ‘ ಪುತ್ತೂರ‍್ದ ಲಿಂಗನಾಥ’ ವಿಡಿಯೋ ಸಾಂಗ್ ಚಾರ್ವಿ ಆಡಿಯೋಸ್ ಕಜೆಮಾರುರವರ ಚೊಚ್ಚಲ ಕಾಣಿಕೆಯಾಗಿದೆ. ಈ ಹಾಡಿಗೆ ಸಂಪೂರ್ಣ ಸಹಕಾರ ನೀಡಿದ ನಿರ್ಮಾಪಕರಿಗೆ, ಹಾಡುಗಾರರಿಗೆ ಹಾಗೂ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತಾ ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.

ಸುದ್ದಿ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯ
‘ಪುತ್ತೂರ‍್ದ ಲಿಂಗನಾಥ’ ತುಳು ಭಕ್ತಿ ಪ್ರಧಾನ ವಿಡಿಯೋ ಆಲ್ಬಂ ಸಾಂಗ್ ಹತ್ತೂರಿನಲ್ಲಿ ಮೆಚ್ಚುಗೆ ಗಳಿಸಿಕೊಂಡಿರುವ ಪುತ್ತೂರು ‘ಸುದ್ದಿ ಯೂಟ್ಯೂಬ್ ಚಾನೆಲ್’ನಲ್ಲಿ ಲಭ್ಯವಿದೆ. ವೀಕ್ಷಿಸಿ ಪ್ರೋತ್ಸಾಹಿಸಿ.

‘ ಉತ್ತಮ ಸಂದೇಶ ಸಾರುವ15 ಕ್ಕೂ ಅಧಿಕ ಕಿರುಚಿತ್ರಗಳು, ಆಲ್ಬಂ ಸಾಂಗ್‌ಗಳನ್ನು ಜನ್ಮ ಕ್ರಿಯೇಷನ್ಸ್ ಮೂಲಕ ಬಿಡುಗಡೆ ಮಾಡಲಾಗಿದ್ದು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬಗ್ಗೆ ಭಕ್ತಿ ಪ್ರಧಾನ ವಿಡಿಯೋ ಸಾಂಗ್ ಮಾಡಬೇಕು ಎನ್ನುವ ಆಸೆ ಇತ್ತು ಅದು ಈಗ ನೆರವೇರಿದ್ದು ‘ಪುತ್ತೂರ‍್ದ ಲಿಂಗನಾಥ’ ಎನ್ನುವ ವಿಡಿಯೋ ಭಕ್ತಿ ಗೀತೆ ಬಿಡುಗಡೆ ಮಾಡುವ ಮೂಲಕ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಿದ್ದೇವೆ. ಶ್ರೀ ದೇವರ ದಯೆ ನಮ್ಮೆಲ್ಲರ ಮೇಲಿರಲಿ.’
ಡಾ.ಹರ್ಷ ಕುಮಾರ್ ರೈ ಮಾಡಾವು,
ನಿರ್ಮಾಪಕರು, ಜನ್ಮ ಕ್ರಿಯೇಷನ್ಸ್ ಪುತ್ತೂರು

LEAVE A REPLY

Please enter your comment!
Please enter your name here