ಬೆಳ್ಳಿಪ್ಪಾಡಿ ಸ.ಹಿ.ಪ್ರಾ ಶಾಲೆಯಲ್ಲಿ ಯಕ್ಷಗಾನ ತರಬೇತಿ ಕೇಂದ್ರ ಉದ್ಘಾಟನಾ ಸಮಾರಂಭ

0

ಪುತ್ತೂರು :ಬೆಳ್ಳಿಪ್ಪಾಡಿ ಸರಕಾರಿ ಹಿ.ಪ್ರಾ ಶಾಲೆಯಲ್ಲಿ ಏ.10ರಂದು ಯಕ್ಷಗಾನ ತರಬೇತಿ ಕೇಂದ್ರವನ್ನು ಬೆಳ್ಳಿಪ್ಪಾಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಡಿ.ವಿ ಮನೋಹರ ಗೌಡರು ಉದ್ಘಾಟಿಸಿದರು.

ಹಿರಿಯ ಯಕ್ಷಗಾನ ಕಲಾವಿದ ಗೋಪಾಲಕೃಷ್ಣ ಪಟೇಲ್‌ ಚಾರ್ವಾಕರವರು ಮಾತನಾಡಿ, ಏಕಕಾಲದಲ್ಲಿ ದೃಶ್ಯವೂ, ಶ್ರಾವ್ಯವೂ ಆಗಿ ಧಾರ್ಮಿಕ ಸಂದೇಶವನ್ನು ಸಾರುವ ವಿಶ್ವಮಾನ್ಯ ಕಲೆ ಯಕ್ಷಗಾನ ಎಂದರು. ನಾಟ್ಯಗುರು ಲಕ್ಷ್ಮಣ ಆಚಾರ್ಯ ಎಡಮಂಗಲ ತರಬೇತಿಯ ವಿವರ ನೀಡಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಸುದೇವ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಗುರು ಜಯಶ್ರೀ, ಉಪಾಧ್ಯಕ್ಷೆ ಪ್ರೇಮಲತಾ, ಪಂಚಾಯತ್‌ ಮಾಜಿ ಸದಸ್ಯೆ ಉಷಾ ಲಕ್ಷ್ಮಣ ಪೂಜಾರಿ, ದಾನಿಗಳಾದ ವೆಂಕಪ್ಪ ನಾಯ್ಕ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಕ್ಷಗಾನ ತರಬೇತಿ ಕೇಂದ್ರದ ಸಂಚಾಲಕ ದಯಾನಂದ ಗೌಡ ದೇವಸ್ಯ ಬಾರ್ತೀಲಿ ಉಪಸ್ಥಿತರಿದ್ದರು. ಪ್ರಭಾರ ಶಿಕ್ಷಕಿ ಸುಮಿತ್ರ ಸ್ವಾಗತಿಸಿದರು.ಮಲ್ಲಿಕಾರ್ಜುನ್‌ ವಂದಿಸಿದರು. ವೈಶಾಲಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here