ಪುತ್ತೂರು ಜಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೊಟ್ಟೆತ್ತಡ್ಕ ನಾಟ್ಯರಂಜಿನಿ ಕಲಾಲಯದಿಂದ ನೃತ್ಯ ಪ್ರದರ್ಶನ

0

ಪುತ್ತೂರು: ಮೊಟ್ಟೆತ್ತಡ್ಕ ನಾಟ್ಯರಂಜಿನಿ ಕಲಾಲಯದ ವಿದ್ಯಾರ್ಥಿಗಳಿಂದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಪ್ರಯುಕ್ತ ಎ.13ರಂದು ಸಂಜೆ 5.15ರಿಂದ ನಟರಾಜ ವೇದಿಕೆಯಲ್ಲಿ ನೃತ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭರತನಾಟ್ಯ ಮತ್ತು ಕೂಚುಪುಡಿ ನೃತ್ಯ ಪ್ರದರ್ಶಿಸಲಾಯಿತು. ದೇವಸ್ಥಾನದ ಕಾರ್ಯಕ್ರಮ ಸಮಿತಿಯವರಿಂದ ನಾಟ್ಯರಂಜಿನಿ ಕಲಾಲಯದ ವಿದುಷಿ ಪ್ರಮೀಳಉದಯ್ ಮತ್ತು ಕಲಾಲಯದ ಅಧ್ಯಕ್ಷ ನಾರಾಯಣ ಅವರನ್ನು ಸನ್ಮಾನಿಸಲಾಯಿತು.


2006ರಲ್ಲಿ ಕೇರಳದ ಕಾಸರಗೋಡಿನಲ್ಲಿ ಆರಂಭಗೊಂಡ ನಾಟ್ಯರಂಜಿನಿ ಕಲಾಲಯ ಸಂಸ್ಥೆಯು 20ನೇ ವರ್ಷದ ಸಂಭ್ರಮಕ್ಕೆ ಕಾಲಿರಿಸಿದೆ. ಪುತ್ತೂರು, ಅಳಕೆಮಜಲು ಮತ್ತು ಕಾಸರಗೋಡಿನಲ್ಲಿ ಶಾಖೆಗಳನ್ನು ಹೊಂದಿದ್ದು ಭರತನಾಟ್ಯ, ಮೋಹಿನಿಯಾಟ್ಟಂ, ಕೂಚುಪುಡಿ ಮತ್ತು ಕೇರಳನಡನಂ ಎಂಬ ಶಾಸೀಯ ನೃತ್ಯದ ತರಗತಿಯನ್ನು ನಡೆಸುತ್ತಿದೆ.

LEAVE A REPLY

Please enter your comment!
Please enter your name here