ನಾಳೆ (ಏ.19) ಬೆಟ್ಟಂಪಾಡಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಲೋಗೋ ಬಿಡುಗಡೆ, ಭಕ್ತರಿಂದ ಕರಸೇವೆ

0

ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 2027 ರ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಲೋಗೋ ಬಿಡುಗಡೆ ಸಮಾರಂಭವು ಏ. 19 ರಂದು ಶ್ರೀ ಕ್ಷೇತ್ರ ಬೆಟ್ಟಂಪಾಡಿ ಯಲ್ಲಿ ನಡೆಯಲಿದೆ. ಕ್ಷೇತ್ರದ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷರೂ ಆಗಿರುವ, ಶಾಸಕ ಅಶೋಕ್ ಕುಮಾರ್ ರೈ ಲೋಗೋ‌ ಬಿಡುಗಡೆಗೊಳಿಸಲಿದ್ದಾರೆ.

ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ, ಈಗಾಗಲೇ ಬ್ರಹ್ಮಕಲಶೋತ್ಸವ ಸಮಿತಿ ರಚನೆಯಾಗಿದ್ದು, ಅದರ ಮುಂದಾಳತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನಡೆಸಲು ಯೋಜಿಸಲಾಗಿದೆ. 2013 ರಲ್ಲಿ ಅಶೋಕ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆದಿರುವ ಬೆಟ್ಟಂಪಾಡಿ ಬ್ರಹ್ಮಕಲಶೋತ್ಸವ ಜಿಲ್ಲೆಯಲ್ಲೇ ಮಾದರಿ ಬ್ರಹ್ಮಕಲಶೋತ್ಸವವಾಗಿ ಹೆಸರು ಪಡೆದಿತ್ತು‌. ಮತ್ತೆ ಭಕ್ತರ ಮನಸ್ಸಿನಲ್ಲಿ ಆ ಗತವೈಭವ ಮರುಕಳಿಸುವ ಕಾಲ ಸನ್ನಿಹಿತವಾಗುತ್ತಿದೆ.


ಭಕ್ತರಿಂದ ಪ್ರಥಮ ಕರಸೇವೆ
ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಯಾಗಿ ಕ್ಷೇತ್ರದಲ್ಲಿ ಹಲವು ಜೀರ್ಣೋದ್ಧಾರ ಕಾರ್ಯಗಳು ನಡೆಯಲಿದ್ದು, ಮುಖ್ಯವಾಗಿ ದೇವಳದ ದಕ್ಷಿಣ ಭಾಗದ ಗೋಪುರ ಶಿಥಿಲಾವಸ್ಥೆಯಲ್ಲಿದ್ದು, ಅದನ್ನು ಕೆಡಹಿ ಪುನರ್ ನಿರ್ಮಾಣದ ಯೋಜನೆ ಹಾಕಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಂದ ಪ್ರಥಮ ಕರಸೇವೆಯು ‘ಈಶಸೇವೆ’ ಎಂಬ ಹೆಸರಿನೊಂದಿಗೆ ಏ. 19 ರಂದು ಆರಂಭಗೊಳ್ಳಲಿದೆ. ಊರ ಪರವೂರ ಭಕ್ತರು ಕರಸೇವೆಯಲ್ಲಿ ಪಾಲ್ಗೊಳ್ಳುವಂತೆ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಅಭಿವೃದ್ಧಿ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here