







ಪುತ್ತೂರು: ಕೆದಂಬಾಡಿ ಗ್ರಾಮದ ಶಕ್ತಿ ದೇವತೆ ತಿಂಗಳಾಡಿ ಶ್ರೀ ಮಾರಿಯಮ್ಮ ದೇವಿಯ ವಾರ್ಷಿಕ ಮಾರಿ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಏ.14 ರಂದು ಶ್ರೀ ಮಾರಿಯಮ್ಮ ದೇವಸ್ಥಾನದ ವಠಾರದಲ್ಲಿ ಜರಗಿತು.


ಈ ಸಂದರ್ಭದಲ್ಲಿ ಅಲೇರಿ ಶ್ರೀ ಸತ್ಯ ಸಾರಮಾಣಿ ಆದಿ ಕ್ಷೇತ್ರದ ಗೌರವಾಧ್ಯಕ್ಷ ಪರಮೇಶ್ವರ ಸಾಲಿಯಾನ್, ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ಇದರ ಕೋಶಾಧಿಕಾರಿ ರಾಜಾ ಚೇಂಡ್ತಿಮಾರ್, ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ಪುತ್ತೂರು ಇದರ ಮಾಜಿ ಜಿಲ್ಲಾಧ್ಯಕ್ಷ ಮೋಹನ್ ನೆಲ್ಲಿಗುಂಡಿ, ಶ್ರೀ ಮಾರಿಯಮ್ಮ ಸೇವಾ ಸಮಿತಿಯ ಗೌರವಾಧ್ಯಕ್ಷ ಅಣ್ಣು ಟಿ, ಶ್ರೀ ಮಾರಿಯಮ್ಮ ಸೇವಾ ಸಮಿತಿಯ ಅಧ್ಯಕ್ಷ ಸುಂದರ ಸಿ, ಕೆದಂಬಾಡಿ ಬ್ಲಾಕ್ ಕಾಂಗ್ರೆಸ್‌ನ ಎಸ್.ಸಿ ಘಟಕದ ಅಧ್ಯಕ್ಷ ಸೋಮಯ್ಯ ಹಾಗೂ ಭಕ್ತಾದಿಗಳು,ಊರವರು ಉಪಸ್ಥಿತರಿದ್ದರು.



ಎ.26ರಿಂದ 28 ಶ್ರೀ ಮಾರಿ ಪೂಜೆ ಮಹೋತ್ಸವ
ತಿಂಗಳಾಡಿ ಗಾಂಧಿನಗರದಲ್ಲಿರುವ ಶ್ರೀ ಮಾರಿಯಮ್ಮ ದೇವಿ ದೇವಸ್ಥಾನ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ಮಾರಿ ಪೂಜೆ ಮಹೋತ್ಸವವು ಎ.೨೬ ರಿಂದ ೨೮ ರ ವರೇಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅನುವಂಶಿಕ ಆಡಳಿತ ಮೊಕ್ತೇಸರ ಅಂಗಾರ ತಿಳಿಸಿದ್ದಾರೆ.










