







ಪುತ್ತೂರು : ಭಾರತೀಯ ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿ, ನೆಲ್ಲಿಕಟ್ಟೆ ನಿವಾಸಿ ಜೋನ್ ಲೋಬೊ(91ವ.)ರವರು ವಯೋಸಹಜದಿಂದಾಗಿ ಏ.18 ರಂದು ಅಪರಾಹ್ನ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.


ಮೃತರು ಮಾಯಿದೆ ದೇವುಸ್ ಚರ್ಚ್ ನ ಸಂತ ವಿನ್ಸೆಂಟ್ ದೇ ಪಾವ್ಲ್ ಸೊಸೈಟಿಯ ಸಕ್ರಿಯ ಸದಸ್ಯರಾಗಿದ್ದರು. ಕೋರ್ಟ್ ರೋಡ್ ನಲ್ಲಿನ ಆನಂದ ಮೆಡಿಕಲ್ಸ್ ಅನ್ನು ಅವರು ಮುನ್ನೆಡೆಸುತ್ತಾ ಬಂದಿದ್ದರು. ಮೃತರು ಪತ್ನಿ ಲಿಲ್ಲಿ ಬ್ರ್ಯಾಗ್ಸ್, ಪುತ್ರರಾದ ಕೆಪಿಸಿಎಲ್ ನಿವೃತ್ತ ಉದ್ಯೋಗಿ ವಿಲಿಯಂ ಲೋಬೊ, ಉದ್ಯಮಿ ವಾಲ್ಟರ್ ಲೋಬೊ, ಸಂತೋಷ್ ಲೋಬೊ ಮಂಗಳೂರು, ಗ್ಲೆನ್ ಆನಂದ್ ಲೋಬೊ ದುಬೈ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.













