







ಪೆರಾಬೆ: ಚರಿತ್ರೆ ಪ್ರಸಿದ್ಧವಾದ ಕುಂತೂರು ಬೇಲ್ಪಾಡಿ ಮಖಾಂನಲ್ಲಿ ಪ್ರತಿ ತಿಂಗಳು ನಡೆಸಿಕೊಂಡು ಬರುವ ಮಜ್ಲಿಸುನ್ನೂರ್ ಇದರ 9ನೇ ವಾರ್ಷಿಕ ಮಹಾಸಂಗಮ ಏ.16ರಂದು ಮಗ್ರಿಬ್ ನಮಾಝ್ನ ಬಳಿಕ ನಡೆಯಿತು.



ಜಮಾಅತ್ ಮುದರ್ರೀಸ್ ಮೊಯಿದು ಫೈಝಿ ಎಡಪ್ಪಾಲ್ ಉದ್ಘಾಟಿಸಿ ಮಾತನಾಡಿ, ಮಹಾತ್ಮರ ಸ್ಮರಣೆ ಇಬಾದತ್ ಆಗಿದೆ ಎಂದು ಹೇಳಿದರು. ಪಾಣಕ್ಕಾಡ್ ಸಯ್ಯಿದ್ ರಶೀದಲಿ ಶಿಹಾಬ್ ತಂಙಳ್ ಮಜ್ಲಿಸುನ್ನೂರ್ಗೆ ನೇತೃತ್ವ ನೀಡಿದರು. ಅಬೂಬಕ್ಕರ್ ಸಿದ್ದೀಕ್ ಅಝ್ಹರಿ ಮುಖ್ಯ ಪ್ರಭಾಷಣ ಮಾಡಿದರು. ಜಮಾಅತ್ ಅಧ್ಯಕ್ಷರಾದ ಅನೀಸ್ ನೂಜಿಲ ಅಧ್ಯಕ್ಷತೆ ವಹಿಸಿದ್ದರು. ಹೆಚ್.ಐ.ಮದ್ರಸ ಪ್ರಧಾನ ಅಧ್ಯಾಪಕರಾದ ಹಸನ್ ಇರ್ಷಾನಿ ಸ್ವಾಗತಿಸಿದರು. ಅಶ್ರಫ್ ಮುಸ್ಲಿಯಾರ್ ಕೋಲ್ಪೆ ವಂದಿಸಿದರು. ಕೊನೆಯಲ್ಲಿ ಅನ್ನದಾನ ಮಾಡಲಾಯಿತು.













