ಕೋಲ್ಪೆ ಮಖಾಂ ಉರೂಸ್, ಮುಖ್ಯ ಪ್ರಭಾಷಣ

0

ನೆಲ್ಯಾಡಿ: ಬದ್ರಿಯಾ ಜುಮ್ಮಾ ಮಸೀದಿ ಸಯ್ಯದ್ ಮಲ್ಹರ್ ವಲಿಯುಲ್ಲಾಹಿ(ಖ.ಸಿ.)ದರ್ಗಾ ಶರೀಫ್ ಕೋಲ್ಪೆ-ನೆಲ್ಯಾಡಿ ಇದರ ಆಶ್ರಯದಲ್ಲಿ ನಡೆಯುತ್ತಿರುವ ಕೋಲ್ಪೆ ಮಖಾಂ ಉರೂಸ್ 2026ರ 2ನೇ ದಿನವಾದ ಏ.18ರಂದು ಸಂಜೆ ಉದ್ಯಾವರ ಕೇಂದ್ರ ಜುಮ್ಮಾ ಮಸೀದಿ ಖತೀಬ್ ಅಶ್ರಫ್ ಫೈಝಿ ಕೊಡಗು ಇವರಿಂದ ಮುಖ್ಯ ಪ್ರಭಾಷಣ ನಡೆಯಿತು.


ಕೋಲ್ಪೆ ಬಿಜೆಎಂ ಖತೀಬ್ ಇಸ್ಹಾಕ್ ಫೈಝಿ ದುವಾ: ನೆರವೇರಿಸಿದರು. ಕೋಲ್ಪೆ ಬಿಜೆಎಂ ಉಪಾಧ್ಯಕ್ಷ ಎಸ್.ಕೆ.ಅಬ್ದುಲ್ ರಝಾಕ್ ಅಧ್ಯಕ್ಷತೆ ವಹಿಸಿದ್ದರು. ಕೋಲ್ಪೆ ನೂರಾನಿಯ ಮದರಸದ ಸದರ್ ಉಸ್ತಾದ್ ಅಬ್ದುಲ್ ಜಬ್ಬಾರ್ ಅಸ್ಲಮಿ ಉದ್ಘಾಟಿಸಿದರು.


ಕೋಲ್ಪೆ ನೂರಾನಿಯಾ ಮದರಸದ ಮುಅಲ್ಲಿಂ ಶರೀಫ್ ನಿಝಾಮಿ, ಉಸ್ತುವಾರಿ ಕೆ.ಕೆ.ಉಸ್ಮಾನ್ ಹಾಜಿ, ಎಸ್‌ಕೆಎಸ್‌ಎಸ್‌ಎಫ್ ಗೋಳಿತ್ತೊಟ್ಟು ಶಾಖೆ ಅಧ್ಯಕ್ಷ ಹನೀಫ್ ಮರ್ಲಾಪ್, ಗೋಳಿತ್ತೊಟ್ಟು ಯಂಗ್‌ಮೆನ್ಸ್ ಅಧ್ಯಕ್ಷ ರಿಝ್ವಾನ್, ಕೊಣಾಲು ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಕೆ.ಇ.ರಫೀಕ್, ಕೋಲ್ಪೆ ಬಿಜೆಎಂ ಕಾರ್ಯದರ್ಶಿ ಅಬ್ಬಾಸ್ ಕಲಾಯಿ, ಸದಸ್ಯ ಸಾಬ್‌ಜಾನ್ ಸಾಹೇಬ್, ಕೋಲ್ಪೆ ಬಿಜೆಎಂ ಆಡಳಿತ ಸಮಿತಿ ಸದಸ್ಯರಾದ ಯು.ಕೆ.ಹಮೀದ್, ಕೆ.ಕೆ.ಶರೀಫ್, ಮೂಸಾನ್ ಕೊಳಂಬೆ, ವೈ.ನವಾಝ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಂ.ಕೆ.ಅಶ್ರಫ್ ಮೌಲವಿ ಕೋಲ್ಪೆ ನಿರೂಪಿಸಿದರು. ಕೋಲ್ಪೆ ಬಿಜೆಎಂ ಅಧ್ಯಕ್ಷ ಅಬ್ದುಲ್ ಶುಕೂರು ಕೆ.ಜಿ.ಎನ್., ಪ್ರಧಾನ ಕಾರ್ಯದರ್ಶಿ ಶಮೀರ್ ಅರ್ಶದಿ ಹಾಗೂ ಪದಾಧಿಕಾರಿಗಳು, ಸದಸ್ಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here