






ಪುತ್ತೂರು: ಕೆದಂಬಾಡಿ ಗ್ರಾಮದ ತಿಂಗಳಾಡಿ ಶ್ರೀ ಮಾರಿಯಮ್ಮ ದೇವಿ ದೇವಸ್ಥಾನದ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ಮಾರಿ ಪೂಜೆ ಮಹೋತ್ಸವವು ಎ.26 ರಿಂದ 28 ರವರೇಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಎ.19 ರಂದು ಗೊನೆ ಮುಹೂರ್ತ ನಡೆಯಿತು.



ಈ ಸಂದರ್ಭದಲ್ಲಿ ಶ್ರೀ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಅಂಗಾರ ತಿಂಗಳಾಡಿ ದರ್ಬೆ, ಶ್ರೀ ಮಾರಿಯಮ್ಮ ಸೇವಾ ಸಮಿತಿಯ ಗೌರವ ಅಧ್ಯಕ್ಷ ಅಣ್ಣು ತಿಂಗಳಾಡಿ, ಸೋಮಯ್ಯ ತಿಂಗಳಾಡಿ, ಶ್ರೀ ಮಾರಿಯಮ್ಮ ಸೇವಾ ಸಮಿತಿಯ ಅಧ್ಯಕ್ಷ ಸುಂದರ ತಿಂಗಳಾಡಿ, ಬಾಲಕೃಷ್ಣ ತೆಂಕಿಲ ಪುತ್ತೂರು, ವಾಮನ ತೆಂಕಿಲ ದಿವಾಕರ ದರ್ಬೆ, ಚಂದ್ರ ತಿಂಗಳಾಡಿ, ಶಿವ ಕರ್ನೂರು ಗುತ್ತು, ವಿಜಯ್ ತಿಂಗಳಾಡಿ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.













