ಭಾರತ್ ಕಟ್ಟಡ ಕಾರ್ಮಿಕರ ಜಿಲ್ಲಾ ಸಂಘಕ್ಕೆ ಆಯ್ಕೆ

0

ಅಧ್ಯಕ್ಷ: ಮಹಮ್ಮದ್ ಅಶ್ರಫ್ ಬನ್ನೂರು, ಪ್ರ.ಕಾರ್ಯದರ್ಶಿ: ಲೋಕೇಶ್ ನಾಯ್ಕ ಪಿ. ಸಂಪ್ಯ

ಪುತ್ತೂರು: ಬೊಳುವಾರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ್ ಕಟ್ಟಡ ಕಾರ್ಮಿಕರ ಜಿಲ್ಲಾ ಸಂಘದ ನೂತನ ಅಧ್ಯಕ್ಷರಾಗಿ ಮಹಮ್ಮದ್ ಅಶ್ರಫ್ ಬನ್ನೂರು, ಗೌರವಾಧ್ಯಕ್ಷರಾಗಿ ಲೋಕೇಶ್ ಹೆಗ್ಡೆ ಉರ್ಲಾಂಡಿ, ಕಾರ್ಯಾಧ್ಯಕ್ಷರಾಗಿ ಪೌಲ್ ಡಿ’ಸೋಜಾ ಮರೀಲು ಅವರು ಆಯ್ಕೆಯಾಗಿದ್ದಾರೆ.‌


ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್ ನಾಯ್ಕ ಪಿ. ಸಂಪ್ಯ, ಉಪಾಧ್ಯಕ್ಷರಾಗಿ ಬಶೀರ್ ಅಹ್ಮದ್ ಬನ್ನೂರು, ಕಾನೂನು ಸಲಹೆಗಾರರಾಗಿ ವಕೀಲ ದೀಪಕ್ ಬೊಳ್ವಾರು, ಸಲಹೆಗಾರರಾಗಿ ರುಕ್ಮಯ್ಯ ಗೌಡ, ಖಜಾಂಜಿಯಾಗಿ ಇನಾಸ್ ವೇಗಸ್, ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್ ಕೆ. ಮಯೂರ ಮಜ್ಜಾರಡ್ಕ, ಜೊತೆ ಕಾರ್ಯದರ್ಶಿಗಳಾಗಿ ಮಹಮ್ಮದ್ ಸಾಬೀರ್ ಬನ್ನೂರು, ವಸಂತ ಕುಮಾರ್ ಬೆದ್ರಾಳ ಅವರು ಆಯ್ಕೆಯಾಗಿದ್ದಾರೆ.


ಸಮಿತಿ ಸದಸ್ಯರಾಗಿ ಕೆ.ಕೆ ಸುರೇಶ್ ಬನ್ನೂರು, ಸುಽರ್ ಕೆ.ನಾಯ್ಕ ಸಂಪ್ಯ, ಗಣೇಶ್ ಪೆರ್ನೆ, ಬಸವರಾಜ್ ಬನ್ನೂರು, ಕೊರಗಪ್ಪ ಪೂಜಾರಿ ಕಜೆ, ಭರತ್ ಪಡ್ಡಾಯೂರು, ಮೋಹನ್ ಸಿಂಹವನ, ರಾಮಕೃಷ್ಣ ಗೌಡ ಲಿಂಗದಗುಡ್ಡೆ, ಜಾನ್ ಪಾಯಸ್ ಉರಮಾಲ್ ಅವರು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here