







ಪುತ್ತೂರು : ಈಶ ಎಜ್ಯುಕೇಶನಲ್ ಆಂಡ್ ಸೋಶಿಯಲ್ ಸರ್ವೀಸ್ ಟ್ರಸ್ಟ್(ರಿ) ನ ಆಡಳಿತದಲ್ಲಿ ಬೆಳ್ಳಿ ಹಬ್ಬ ಸಂಭ್ರಮದಿಂದ ಆಚರಿಸಿದ ಈಶ ವಿದ್ಯಾಲಯದಲ್ಲಿ ಖಾಸಗಿಯಾಗಿ ನೇರವಾಗಿ ದ್ವಿತೀಯ ಪಿ.ಯು.ಸಿ ತರಗತಿಗೆ ಹಾಜರಾಗಿ ಪರೀಕ್ಷೆ ಬರೆದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ರಕ್ಷಿತಾರವರು ಕಲಾ ವಿಭಾಗದಲ್ಲಿ ಟ್ಯುಟೋರಿಯಲ್ಸ್ ಇತಿಹಾಸದಲ್ಲೇ ದಾಖಲೆಯ 551 (92%) ಫಲಿತಾಂಶದೊಂದಿಗೆ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬೈಲಾಡಿ ನಿವಾಸಿ ಬ್ಯಾಂಕ್ ಆಫ್ ಬರೋಡಾದಲ್ಲಿ ಡಿ.ಎಸ್.ಎ ಉದ್ಯೋಗಿ ಗಣೇಶ್ ರೈ ಹಾಗೂ ಶ್ರೀಮತಿ ನಮಿತಾರವರ ಸುಪುತ್ರಿ.












