







ಪುತ್ತೂರು:ಶ್ರೀ ಅಮ್ಮನವರ ದೇವಸ್ಥಾನ ಅರ್ಯಾಪು ನೇರಳಕಟ್ಟೆ ಶ್ರೀ ಕ್ಷೇತ್ರದ ವಾರ್ಷಿಕ ಮಾರಿ ಪೂಜೆಯು ಏ.26 ಮತ್ತು 27ರಂದು ಕ್ಷೇತ್ರದ ತಂತ್ರಿವರ್ಯರಾದ ಕೆಮ್ಮಿಂಜೆ ನಾಗೇಶ ತಂತ್ರಿ ಇವರ ನೇತೃತ್ವದಲ್ಲಿ ಹಾಗೂ ಕ್ಷೇತ್ರದ ಆಡಳಿತ ಸಮಿತಿಯ ಗೌರವಾಧ್ಯಕ್ಷರಾದ ಸತೀಶ್ ರೈ ಮಿಷನ್ ಮೂಲೆ ಇವರ ಗೌರವಾಧ್ಯಕ್ಷತೆಯಲ್ಲಿ ನಡೆಯಲಿದೆ.



ಈ ಮಹಾ ಉತ್ಸವಕ್ಕೆ ಗೊನೆ ಮಹೂರ್ತವನ್ನು ಏ. 20ರಂದು ನೆರವೇರಿತು. ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷರಾದ ರವಿಚಂದ್ರ ಆಚಾರ್ಯ, ಉಪಾಧ್ಯಕ್ಷ ಆನಂದ ಅಮೀನ್ ಹೊಸಮನೆ, ಆಡಳಿತ ಸಮಿತಿ ಸದಸ್ಯರಾದ ನೇಮಾಕ್ಷ ಸುವರ್ಣ ಅಮ್ಮುಂಜೆ, ಗ್ರಾಮ ಪಂಚಾಯತ್ ಸದಸ್ಯ ಪವಿತ್ರ ರೈ ಬಾಲಿಲ, ಮೊಕ್ತೇಶ್ವರರಾದ ಗೋಪಾಲ ಬೆಟ್ಟಂಪಾಡಿ, ಸುಂದರ್ ನೆಲ್ಲಿಗುಂಡಿ, ಸುರೇಶ್ ಪಿ ಪ್ರದಾನ ಅರ್ಚಕ ಸುನಿಲ್ ಮಚ್ಚೇಂದ್ರ ಭಾಸ್ಕರ್ ನೆಲ್ಲಿಗುಂಡಿ, ಸೇವಾ ಸಮಿತಿ ಅಧ್ಯಕ್ಷ ಜಗನ್ನಾಥ ಪಿ, ಸದಸ್ಯರಾದ ರಂಗಪ್ಪ ಸಂಪಾಜೆ, ಹರೀಶ್ ಚಿದಾನಂದ, ಸೋಮಪ್ಪ ಪಾಲ್ತಾಡ್, ಗಿರೀಶ್ ಅರಿಯಡ್ಕ, ರಮೇಶ್ ಹಾಗೂ ಹಲವಾರು ಭಕ್ತರಿಗಳು ಹಾಜರಿದ್ದರು.













