







ನೆಲ್ಯಾಡಿ: ಕಾರು ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ ಕಾರು ಜಖಂಗೊಂಡ ಘಟನೆ ಗುಂಡ್ಯ-ಸುಬ್ರಹ್ಮಣ್ಯ ರಸ್ತೆಯ ಶಿರಿಬಾಗಿಲು ಗ್ರಾಮದ ಅನಿಲ ಎಂಬಲ್ಲಿ ಏ.19ರಂದು ಮಧ್ಯಾಹ್ನ ನಡೆದಿದೆ.


ಬೆಳಂದೂರು ಸುರುಳಿಮಜಲು ನಿವಾಸಿ ವಾಸುದೇವ ಎಂಬವರು ತನ್ನ ಕಾರಿನಲ್ಲಿ ಮೋಹನ ಎಂಬವರ ಜೊತೆಗೆ ತುಮಕೂರಿಗೆ ಹೂ ತರಲು ಹೋಗುತ್ತಿದ್ದವರು ಕಡಬ ತಾಲೂಕು ಶಿರಿಬಾಗಿಲು ಗ್ರಾಮದ ಅನಿಲ ಎಂಬಲ್ಲಿಗೆ ತಲುಪಿದಾಗ ಎದುರುಗಡೆಯಿಂದ ಅಂದರೆ ಗುಂಡ್ಯ ಕಡೆಯಿಂದ ಬರುತ್ತಿದ್ದ ಲಾರಿಯನ್ನು ಅದರ ಚಾಲಕ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಲಾರಿ ಕಾರಿಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರಿನ ಮುಂಭಾಗ ಜಖಂಗೊಂಡಿದೆ. ಪ್ರಯಾಣಿಕರಿಗೆ ಯಾವುದೇ ಗಾಯ ಆಗಿರುವುದಿಲ್ಲ. ಈ ಬಗ್ಗೆ ಕಾರು ಚಾಲಕ ವಾಸುದೇವ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













