ಕೆಮ್ಮಾಯಿ: ಅಖಂಡ ಹನುಮಾನ್ ಚಾಲೀಸ್ ಪಠಣ ಯಜ್ಞ : ಚಾಲೀಸ್ ಪಠಣ ಮಾಡಲು ನೋಂದಾವಣೆಗೆ ಅವಕಾಶ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಭರತಪುರದ ಶ್ರೀಪಂಚಮುಖಿ ಹನುಮಾನ್ ಮಂದಿರದ ದ್ವಿತೀಯ ಪ್ರತಿಷ್ಠಾ ವರ್ಧಂತಿ ಉತ್ಸವದ ಪ್ರಯುಕ್ತ ಎ.26ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಡೆಯಲಿರುವ 12 ಗಂಟೆಗಳ ಅಖಂಡ ಹನುಮಾನ್ ಚಾಲೀಸ್ ಪಠಣ ಯಜ್ಞ ಕಾರ್ಯಕ್ರಮದಲ್ಲಿ ಚಾಲೀಸ್ ಪಠಣ ಮಾಡಲು ಹೆಸರು ನೋಂದಾವಣೆಗೆ ಮಾಡಬಹುದು. ಭಜನಾ ಮಂಡಳಿ, ಸ್ವಸಹಾಯ ಸಂಘ, ಯುವಕ ಮಂಡಲದ ಸದಸ್ಯರು ತಂಡವಾಗಿ ಹಾಗೂ ವೈಯುಕ್ತಿಕವಾಗಿ ಹನುಮಾನ್ ಚಾಲೀಸ್ ಮಾಡಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ 8762665613 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here